ಮಹಾರಾಷ್ಟ್ರ, ಸೆ 17 (DaijiworldNews/HR): ಮಹಾರಾಷ್ಟ್ರದ ಬಡ ಕುಟುಂಬದಲ್ಲಿ ಜನಿಸಿ ಯುಎಇನಲ್ಲಿ ಖ್ಯಾತ ವೈದ್ಯೆಯಾಗಿ ಗುರುತಿಸಿಕೊಂಡು ಪೋರ್ಬ್ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ. ಜುಲೇಖಾ ದೌದ್ ಅವರ ಯಶಸ್ಸಿನ ಕಥೆ ಎಲ್ಲರಿಗೂ ಸ್ಫೂರ್ತಿದಾಯಕ.
ಕಡುಬಡತನದಲ್ಲಿ ಬೆಳೆದು ಅವೆಲ್ಲವನ್ನು ಮೆಟ್ಟಿ ನಿಂತ ಡಾ ಜುಲೇಖಾ ದೌದ್ ಅವರು ಗರ್ಲ್ಫ್ ದೇಶದಲ್ಲಿ ಆಸ್ಪತ್ರೆ ಕಟ್ಟಿಸಿ ಅನೇಕರ ಬಾಳಿಗೆ ದೇವರಾಗಿದ್ದು, ಭಾರತದಲ್ಲಿ ಕೂಡ ಆಸ್ಪತ್ರೆ ಕಟ್ಟಿಸಿದ್ದಾರೆ.
ಮಹಾರಾಷ್ಟ್ರದ ಬಡ ಕುಟುಂಬದಿಂದ ಬಂದಿದ್ದ ಜುಲೇಖಾ ದೌದ್ ವ್ಯಾಪಾರ ಮತ್ತು ಆರೋಗ್ಯ ರಕ್ಷಣೆಯಲ್ಲಿ ಉನ್ನತ ಸ್ಥಾನಕ್ಕೆ ಏರಿದ ದುಬೈನ ಶ್ರೀಮಂತ ಭಾರತೀಯ ಮಹಿಳೆಯರಲ್ಲಿ ಒಬ್ಬರು.
ಇನ್ನು ಮಹಾರಾಷ್ಟ್ರದ ಸರ್ಕಾರಿ ವೈದ್ಯಕೀಯ ಶಾಲೆಗೆ ಸೇರಿದ ಅವರು 1964 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ತೆರಳಲು ನಿರ್ಧರಿಸಿ ಬಳಿಕ ಯುಎಇಯಲ್ಲಿ ವೈದ್ಯಕೀಯ ಅಭ್ಯಾಸ ಮಾಡಿದ ಮೊದಲ ಭಾರತೀಯ ಮಹಿಳೆಯಾದರು.
ದುಬೈನಲ್ಲಿ ಉನ್ನತ ಸ್ತ್ರೀರೋಗತಜ್ಞರಾಗಿ 10,000 ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರುವ ಡಾ. ಜುಲೇಖಾ ದೌಡ್ ಅವರು ಯುಎಇಯಲ್ಲಿ ವೈದ್ಯರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಯುಎಇಯಲ್ಲಿ ಫೋರ್ಬ್ಸ್ ಮಧ್ಯಪ್ರಾಚ್ಯದ ಟಾಪ್ 100 ಭಾರತೀಯರ ಪಟ್ಟಿಯಲ್ಲಿ ಜುಲೇಖಾ ದೌದ್ ಕೂಡ ಸ್ಥಾನ ಪಡೆದಿದ್ದು, ಹೆಸರಾಂತ ವೈದ್ಯರಿಂದ ಸ್ಥಾಪಿಸಲ್ಪಟ್ಟ ಜುಲೇಖಾ ಹಾಸ್ಪಿಟಲ್ ಗ್ರೂಪ್ ಈಗ USD 440 ಮಿಲಿಯನ್ಗಿಂತಲೂ (3632 ಕೋಟಿ ರೂ.) ಹೆಚ್ಚಿನ ಜಾಗತಿಕ ಆದಾಯವನ್ನು ಹೊಂದಿದೆ.