ಬೆಂಗಳೂರು, ಸೆ 17 (DaijiworldNews/AK) : ಉಪ ಮುಖ್ಯಮಂತ್ರಿ ಹುದ್ದೆಯು ಸಾಂವಿಧಾನಿಕ ಹುದ್ದೆ ಅಲ್ಲ. ಅದಕ್ಕೆ ಹೆಚ್ಚು ಮಹತ್ವ ಕೊಡಬಾರದು ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.
3 ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ರಾಜಣ್ಣ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪತ್ರ ಬರೆಯುತ್ತೇನೆ ಅಂತ ಹೇಳಿದ್ದಾರೆ. ಅದು ಸಲಹೆ ರೂಪದಲ್ಲಿ ಕೊಟ್ಟಿರಬಹುದು ಎಂದಿದ್ದಾರೆ.
ಡಿಸಿಎಂ ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು. ಏಕೆಂದರೆ ಅದು ಸಾಂವಿಧಾನಿಕ ಹುದ್ದೆ ಅಲ್ಲಎಂದು ಸ್ಪಷ್ಟನೆ ನೀಡಿದ್ದಾರೆ.