ನವದೆಹಲಿ, ಸೆ 20 (DaijiworldNews/MS): ಕೆನಡಾದಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ, ದ್ವೇಷದ ಅಪರಾಧಗಳು ,ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳಿಂದಾಗಿ ಭಾರತೀಯ ಪ್ರಜೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಲಹೆ್ಯನ್ನು ಜಾರಿಗೊಳಿಸಿದೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದ್ದಿರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಆರೋಪಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಕೆನಡಾ ತನ್ನ ನಾಗರಿಕರಿಗೆ ಪ್ರಯಾಣ ಸಲಹೆಯನ್ನು ನೀಡಿದ ಒಂದು ದಿನದ ನಂತರ ಭಾರತ ಸರ್ಕಾರದಿಂದ ಸಲಹೆ ಜಾರಿಗೊಳಿಸಲಾಗಿದೆ. ಭಾರತೀಯ ಪ್ರಜೆಗಳು ಭಾರತ ವಿರೋಧಿ ಚಟುವಟಿಕೆಗೆ ಗುರಿಯಾಗಿರುವ ಕೆನಡಾ ಪ್ರದೇಶಗಳಿಗೆ ಪ್ರಯಾಣಿಸದಂತೆ, ಹಾಗೂ ಅತ್ಯಂತ ಜಾಗರೂಕರಾಗಿರಿ ಎನ್ನುವ ಸಲಹೆ ನೀಡಿದೆ.
ಇತ್ತೀಚೆಗೆ,ಬೆದರಿಕೆಗಳು ವಿಶೇಷವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ವಿಭಾಗಗಳನ್ನು ಗುರಿಯಾಗಿಸಿಕೊಂಡಿವೆ.
ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಹೈಕಮಿಷನ್ ಮತ್ತು ಕಾನ್ಸುಲೇಟ್ಗಳು ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.