ಲಕ್ನೋ, ಸೆ 22 (DaijiworldNews/MS): ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ಗಳನ್ನು ಮಟಾಶ್ ಮಾಡುವ ಆದಿತ್ಯನಾಥ್ ಸರ್ಕಾರದ ಪ್ರಯತ್ನ ಮುಂದುವರಿದಿದೆ. ಮಹಿಳಾ ಪೊಲೀಸ್ ಪೇದೆಯೊಬ್ಬರ ಮಾರಾಣಾಂತಿಕ ಹಲ್ಲೆಯ ಪ್ರಮುಖ ಆರೋಪಿಯಾಗಿರುವ ಅನೀಶ್ ಖಾನ್ ಎಂಬವನನ್ನು ಪೊಲೀಸರು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ.
ಎನ್ಕೌಂಟರ್ನಲ್ಲಿ ಅನೀಸ್ನ ಇಬ್ಬರು ಸಹಚರರಾದ ಆಜಾದ್ ಮತ್ತು ವಿಷಂಭರ್ ದಯಾಲ್ ಕೂಡ ಗಾಯಗೊಂಡಿದ್ದಾರೆ. ಈ ಮೂವರು ಮಹಿಳಾ ಪೇದೆಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದರು.
ಸೊರಾನ್ನ ಭದ್ರಿ ಗ್ರಾಮದಲ್ಲಿ ನೆಲೆಸಿರುವ ಹೆಡ್ ಕಾನ್ಸ್ಟೇಬಲ್ ಸುಮಿತ್ರಾ ಪಟೇಲ್ ಅವರು ಆಗಸ್ಟ್ 30 ರಂದು ಕರ್ತವ್ಯಕ್ಕಾಗಿ ಅಯೋಧ್ಯೆಗೆ ಹೋಗಲು ಫೈಜಾಬಾದ್ನಿಂದ ಸರಯು ಎಕ್ಸ್ಪ್ರೆಸ್ ಹತ್ತಿದ್ದರು. ಈ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಇದಾದ ಬಳಿಕ ಪ್ರಜ್ಞಾಹೀನವಾಘಿ ರಕ್ತಸಿಕ್ತ ಸ್ಥಿತಿಯಲ್ಲಿ ಬರ್ತ್ ಕೆಳಗೆ ಪತ್ತೆಯಾಗಿದ್ದರು. ಸದ್ಯ ಇವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಹಿಳಾ ಪೇದೆಯೊಬ್ಬಳೊಂದಿಗೆ ನಡೆದ ಈ ಅಮಾನುಷ ಘಟನೆ ಇಡೀ ಉತ್ತರ ಪ್ರದೇಶವನ್ನೇ ಬೆಚ್ಚಿಬೀಳಿಸಿತ್ತು. ಸ್ವತಃ ಅಲಹಾಬಾದ್ ಹೈಕೋರ್ಟ್ ಈ ವಿಚಾರವನ್ನು ಗಮನಕ್ಕೆ ತಂದಿತ್ತು.