ಹುಬ್ಬಳ್ಳಿ, ಸೆ 22 (DaijiworldNews/HR): ಮಹಿಳಾ ಮೀಸಲಾತಿ ಅಂಗೀಕಾರ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಜಗತ್ತಿನಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳಾ ಮೀಸಲಾತಿ ಇಲ್ಲ. ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು 1980-90ರ ದಶಕದಿಂದ ಮಹಿಳಾ ಮೀಸಲಾತಿ ಕೂಗಿತ್ತು. ಆದರೆ ಇದಕ್ಕೆ ಯಾವ ಸರ್ಕಾರವು ಮುಂದೆ ಬರಲಿಲ್ಲ. ಆದರೆ ಇದೀಗ ಮೋದಿ ಅವರ ಧೃಡ ನಿಶ್ಚಯ, ರಾಜಕೀಯ ಇಚ್ಛಾ ಶಕ್ತಿ ಕಾರಣದಿಂದ ಶಾಸನಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರ ಆಗಿದೆ ಎಂದು ಹೇಳಿದ್ದಾರೆ.