ನವದೆಹಲಿ, ಸೆ 23 (DaijiworldNews/HR): ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ್ದ ಅಮೃತ್ ಸರ್ ಮತ್ತು ಚಂಡೀಗಢದಲ್ಲಿನ ಆಸ್ತಿಯನ್ನು ಎನ್ಐಎ ಜಪ್ತಿ ಮಾಡಿದೆ.
ಕೆನಡಾದಲ್ಲಿರುವ ಹಿಂದೂಗಳು ದೇಶವನ್ನು ತೊರೆಯುವಂತೆ ಪನ್ನು ಎಚ್ಚರಿಕೆ ನೀಡಿದ್ದು, ಅಲ್ಲದೇ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತ ರಾಯಭಾರ ಕಚೇರಿಯ ಕೈವಾಡವಿದೆಯೇ ಎಂಬುದನ್ನು ತಿಳಿಯಲು ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಘೋಷಿಸಿದ್ದ.
ಇನ್ನು ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ(ಯುಎಪಿಎ) 1967ರ ಸೆಕ್ಷನ್ 33(5)ರ ಅನ್ವಯ ಪನ್ನುವಿನ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಎನ್ ಐಎ ವಿಶೇಷ ಕೋರ್ಟ್ ಅನ್ನು ಸಂಪರ್ಕಿಸಿರುವುದಾಗಿ ವರದಿ ವಿವರಿಸಿದೆ.