ಭೋಪಾಲ್,ಸೆ. 30 (DaijiworldNews/AK): ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಧರ್ಮಶಾಸ್ತ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ವಿವಿಯ ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆಗಳನ್ನು ಅನುಮೋದಿಸಿದೆ.
ಪ್ರಸಕ್ತ ಸೆಮಿಸ್ಟರ್ನಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಋತುಸ್ರಾವದ ರಜೆ ನೀಡಬೇಕು ಎಂಬುದು ವಿದ್ಯಾರ್ಥಿನಿಯರ ಒಕ್ಕೂಟವೂ ಬೇಡಿಕೆ ಇಟ್ಟಿತ್ತು. ಹೀಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ಸೆಮಿಸ್ಟರ್ಗೆ 6 ರಜೆಗಳನ್ನು ನೀಡುತ್ತಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಋತುಸ್ರಾವದ ರಜೆಯನ್ನಾಗಿ ಬಳಸಿಕೊಳ್ಳಲು ವಿವಿಯ ಡೀನ್ ಸಮ್ಮತಿ ನೀಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.