ನವದೆಹಲಿ, ಅ 01 (DaijiworldNews/HR): ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಭಾನುವಾರ 209 ರೂ.ಗಳಷ್ಟು ಹೆಚ್ಚಿಸಲಾಗಿದೆ.
ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು 158 ರೂ ಕಡಿತಗೊಳಿಸಿದ ಸುಮಾರು ಒಂದು ತಿಂಗಳ ನಂತರ ಬೆಲೆಯಲ್ಲಿ ಈ ಹೆಚ್ಚಳವಾಗಿದೆ.
ಇನ್ನು ವಾಣಿಜ್ಯ ಮತ್ತು ಗೃಹಬಳಕೆಯ ಎಲ್ ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಿಲಿಂಡರ್ ಗಳ ಬೆಲೆಯು ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆಗಳಿಗೆ ಒಳಗಾಗುತ್ತದೆ.