ಇಡುಕ್ಕಿ, ಅ 03 (DaijiworldNews/MS): ಕೇರಳದ ಸಿರೋ- ಮಲಬಾರ್ ಚರ್ಚ್ನ ಇಡುಕ್ಕಿ ಡಿಯಾಸಿಸ್ನ ಕ್ಯಾಥೋಲಿಕ್ ಪಾದ್ರಿ ಸೋಮವಾರ ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿ ಸೇರ್ಪಡೆಯಾಗಿದ್ದು, ಅದಾಗಿ ಕೆಲವೇ ಗಂಟೆಗಳಲ್ಲಿ ಅವರನ್ನು ಚರ್ಚ್ನ ಪ್ರತಿನಿಧಿ (ವಿಕಾರ್) ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಕ್ಯಾಥೋಲಿಕ್ ಚರ್ಚ್ನ 73 ವರ್ಷ ವಯಸ್ಸಿನ ಫಾ.ಕುರಿಯಾಕೋಸ್ ಮಟ್ಟಮ್ ಅವರು ಸೋಮವಾರ ಇಡುಕ್ಕಿ ಜಿಲ್ಲಾ ಅಧ್ಯಕ್ಷ ಕೆಎಸ್ ಅಜಿ ಅವರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಕೆಲವು ಗಂಟೆಗಳಲ್ಲಿಯೇ ಇಡುಕ್ಕಿ ಡಿಯಾಸಿಸ್ ಅವರ ವಿರುದ್ಧ ಕ್ರಮ ಕೈಗೊಂಡಿದೆ.
ಪಾದ್ರಿಗಳು ರಾಜಕೀಯ ಪಕ್ಷದ ಪರವಾಗಿ ಇರಲು ಅನುಮತಿಸುವುದಿಲ್ಲ. ಸರಳ ಕಾರಣವೆಂದರೆ ಪಾದ್ರಿ ಪಕ್ಷಪಾತಿಯಾಗಲು ಸಾಧ್ಯವಿಲ್ಲ. ಹೀಗಾಗಿ ಅದರ ಅಡಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರೊಬ್ಬರು ತಿಳಿಸಿದ್ದಾರೆ
ಅಡಿಮಲಿ ಸಮೀಪದ ಮಂಕುವಾ ಸೇಂಟ್ ಥಾಮಸ್ ಚರ್ಚ್ನ ಪ್ಯಾರಿಶ್ ಹುದ್ದೆಯಿಂದ ಫಾದರ್ ಮಟ್ಟಂ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ತಿಳಿಸಿದೆ.