ನವದೆಹಲಿ, ಅ 04 (DaijiworldNews/HR): ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಎಲ್ ಪಿಜಿ ಸಿಲಿಂಡರ್ ಗೆ ಹೆಚ್ಚುವರಿಯಾಗಿ ಮತ್ತೆ 100 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಬಡತನ ರೇಖೆಯಲ್ಲಿರುವ ನಿವಾಸಿಗಳಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳ ಸಬ್ಸಿಡಿ 300 ರೂಪಾಯಿಗೆ ಏರಿಕೆಯಾಗಿದೆ.
ಇನನು ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉಜ್ವಲ ಯೋಜನೆ ಫಲಾನುಭವಿಗಳು ಇದೀಗ ಎಲ್ ಪಿಜಿ ಸಿಲಿಂಡರ್ ಗೆ 300 ರೂಪಾಯಿ ಸಬ್ಸಿಡಿ ಪಡೆಯಲಿದ್ದು, ಈ ಮೊದಲು 200 ರೂಪಾಯಿ ಸಬ್ಸಿಡಿ ನೀಡಲಾಗಿತ್ತು. ಇದರೊಂದಿಗೆ ಉಜ್ವಲಾ ಫಲಾನುಭವಿಗಳ ಗ್ಯಾಸ್ ಸಿಲಿಂಡರ್ ಗೆ ಒಟ್ಟು 500 ರೂಪಾಯಿ ಇಳಿಕೆಯಾದಂತಾಗಿದೆ.