ನವದೆಹಲಿ,ಅ 07 (DaijiworldNews/AK): UPSC ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಒಂದು ಕಠಿಣ ಪ್ರಯತ್ನದಿಂದ ಮಾತ್ರ ಸಾಧ್ಯ. ದೇಶದಲ್ಲಿ ಲಕ್ಷಾಂತರ ಮಂದಿ IAS ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ . ಅದರಲ್ಲಿ ಕೆಲವೇ ಕೆಲವರು ಕೊನೆಯ ಸುತ್ತಿಗೆ ಆಯ್ಕೆ ಆಗುತ್ತಾರೆ. ಅದ್ರಲ್ಲೂ ಒಂದು ಅಂಕದಿಂದ ನೇರ ಸಂದರ್ಶದಲ್ಲಿ ಉತ್ತೀರ್ಣವಾಗಲು ಸಾಧ್ಯವಾಗದಾಗ ಇದು ಅಭ್ಯರ್ಥಿಯ ಮನಸ್ಸನ್ನು ತುಂಬಾ ಕುಗ್ಗುವಂತೆ ಮಾಡುತ್ತದೆ. ಆದರೆ ಅಭ್ಯರ್ಥಿಯ ಶ್ರದ್ಧೆ ಮತ್ತು ಆತ್ಮಸ್ಥೆರ್ಯ, ಪ್ರಯತ್ನದಿಂದ ಮಾತ್ರ ಸಾಧಿಸಬಹುದು. ಇದೇ ಶ್ರುತಿ ಶರ್ಮಾ ಅವರ ಸ್ಪೂರ್ತಿದಾಯಕ ಕಥೆ
ಶ್ರುತಿ ಶರ್ಮಾ ಉತ್ತರ ಪ್ರದೇಶದ ಬಿಜ್ನೋರ್ ಗ್ರಾಮದವರು.ತಮ್ಮ ಪೋಸ್ಟ್ ಗ್ರಾಜುಯೇಟ್ ಅನ್ನು ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಜೆಎನ್ಯು ನಲ್ಲಿ ಪಡೆದರು.
ಇತಿಹಾಸ ವಿಷಯದಲ್ಲಿ ಡಿಗ್ರಿ ಹಾನರ್ಸ್ ಪಡೆದಿದ್ದ ಶ್ರುತಿ ಶರ್ಮಾ ತಮ್ಮ ಯಪಿಎಸ್ಸಿ ಸಿಎಸ್ಇ ಮೇನ್ಸ್ಗೂ ಐಚ್ಛಿಕ ವಿಷಯವಾಗಿ ಇತಿಹಾಸವನ್ನೇ ಆಯ್ಕೆ ಮಾಡಿಕೊಂಡಿದ್ದರು. ಜೆಎನ್ಯು ನಲ್ಲಿ ತಮ್ಮ ಪೋಸ್ಟ್ ಗ್ರಾಜುಯೇಷನ್ ಮುಗಿಸಿದ ನಂತರ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ರೆಸಿಡೆನ್ಸಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಸಿವಿಲ್ ಸೇವೆಗಳ ಪರೀಕ್ಷೆಗೆ ಕೋಚಿಂಗ್ ಪಡೆದರು.
ಶ್ರುತಿ ಶರ್ಮಾ ಬೇಸಿಕಲಿ ಇತಿಹಾಸ ವಿದ್ಯಾರ್ಥಿನಿ ಆಗಿದ್ದು, ಯುಪಿಎಸ್ಸಿ ಸಿಎಸ್ಇ ಪರೀಕ್ಷೆಗೆ ದೀರ್ಘ ಕಾಲ ಶ್ರಮ ಹಾಕಿ ಓದಿದ್ದಾರೆ. ತಮ್ಮ ದೆಹಲಿ ವಿವಿ ಶಿಕ್ಷಣ ಮುಗಿಸಿದ ನಂತರದಿಂದಲೇ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಗೆ ಓದಲು ಆರಂಭಿಸಿದ್ದರೆ. ಅವರ ದೀರ್ಘಕಾಲದ ಪರಿಶ್ರಮದಿಂದ ಶ್ರುತಿ UPSC ಪರೀಕ್ಷೆ 2021 ರಲ್ಲಿ ಒಟ್ಟು 54.75 ಶೇಕಡಾ ಅಂಕಗಳೊಂದಿಗೆ ಉನ್ನತ ಶ್ರೇಣಿಯನ್ನು ಪಡೆದರು.
ಎರಡನೇ ಪ್ರಯತ್ನದಲ್ಲಿ ಶ್ರುತಿ ಶರ್ಮಾ 2021ನೇ ಬ್ಯಾಚ್ನ ಭಾರತದ ಮೊದಲ ರ್ಯಾಂಕರ್ ಆಗಿ ಹೊರಹೊಮ್ಮಿದ್ದಾರೆ. ನಾಗರಿಕ ಸೇವೆ ಪರೀಕ್ಷೆಗಳನ್ನು ಕಠಿಣ ಪರಿಶ್ರಮ, ತಾಳ್ಮೆ, ನಾವು ಏನು ಮಾಡುತ್ತೇವೆಯೋ ಅದರ ಮೇಲೆ ನಮಗೆ ನಂಬಿಕೆ, ಆಸಕ್ತಿ, ಪ್ರೀತಿ ಇರಬೇಕು. ಆಗಲೇ ನಮಗೆ ಹೆಚ್ಚು ಪ್ರೇರಣೆ ಸಿಗುತ್ತದೆ. ಸಕ್ಸಸ್ ಸಹ ಆಗುತ್ತೇವೆ" ಎಂದು ಭಾವಿ ಆಕಾಂಕ್ಷಿಗಳಿಗೆ ಸಂದೇಶ ನೀಡಿದ್ದಾರೆ. ಅಲ್ಲದೇ ತಾವು ದೇಶದ ಪ್ರಥಮ ರ್ಯಾಂಕ್ ಆಗಿ ಹೊರಹೊಮ್ಮುತ್ತೇವೆ ಎಂದು ಭಾವಿಸಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಟ್ಟಾರೆ 4 ವರ್ಷದ ಸತತ ಪ್ರಯತ್ನದಿಂದ ಗುರಿ ತಲುಪುವಲ್ಲಿ ಶರ್ಮಾ ಯಶಸ್ಸಿಯಾಗಿದ್ದಾರೆ. ಅಲ್ಲದೇ ಇವರ ಸಾಧನೆ ಇತರಿಗೆ ಮಾದರಿಯಾಗಿದ್ದಾರೆ.