ಬೆಂಗಳೂರು, ಅ 07 (DaijiworldNews/AK):ಬಿಟ್ಕಾಯಿನ್ ಹಗರಣಕ್ಕೆ ಟ್ವಿಸ್ಟ್ . ಬಿಟ್ಕಾಯಿನ್ ಪ್ರಕರಣ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಮನೆಗಳ ಮೇಲೆಯೇ 7 ಕಡೆ ಸಿಐಡಿ ದಾಳಿ ನಡೆಸಿದೆ.
ಬಿಟ್ಕಾಯಿನ್ ಹಗರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಹಗರಣದ ಕಿಂಗ್ಪಿನ್ ಹ್ಯಾಕರ್ ಶ್ರೀಕಿ ಜೊತೆ ಸೇರಿ ಕೆಲ ಸಾಕ್ಷ್ಯ ನಾಶ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿರುವ ಹಿನ್ನೆಲೆ ಒಟ್ಟು 5 ಪೊಲೀಸ್ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಸಿಐಡಿ ಎಡಿಜಿಡಿ ಮನೀಶ್ ಕರ್ಬೀಕರ್ ನೇತೃತ್ವದ ತಂಡ ದಾಳಿ ನಡೆಸಲಾಗಿದೆ.ಕಳೆದ ವಾರವಷ್ಟೇ ಹರ್ವೀಂದ್ರ ಸಿಂಗ್, ನಿತಿನ್ ಮೆಶ್ರಾಮ್, ದರ್ಶಿತ್ ಪಟೇಲ್ ಎಂಬುವವರನ್ನು ಸಿಐಡಿ ಸ್ಪೆಷಲ್ ಟೀಂ ಬಂಧಿಸಿತ್ತು. ಸೈಬರ್ ಎಕ್ಸ್ಪರ್ಟ್ ಸಂತೋಷ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. ಸಂತೋಷ್ ಕಚೇರಿಯಲ್ಲಿಯೇ ಶ್ರೀಕಿಯನ್ನು 20 ದಿನ ಇರಿಸಿ, ಆತನನ್ನು ಬಳಸಿಕೊಂಡು ಹ್ಯಾಕ್ ಮಾಡಲಾಗಿತ್ತು.ಲ್ಯಾಪ್ಟಾಪ್ ಅನ್ನು ಎಸ್ಐಟಿಗೆ ನೀಡದ ಹಿನ್ನೆಲೆ ದಾಳಿ ನಡೆಸಿದೆ.
ಡಿವೈಎಸ್ಪಿ ಶ್ರೀಧರ್ ಪೂಜಾರ್ ಮನೆಯ ಮೇಲೆ 10 ಜನರ ತಂಡದಿಂದ ಎಸ್ಐಟಿ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.