ಬೆಂಗಳೂರು, ಅ 08 (DaijiworldNews/HR): ಭಾರತೀಯ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ನಲ್ಲಿ ಮೋಘ ಸಾಧನೆ ಮಾಡಿದ್ದು, ಇದು ಮುಂದಿನ ಒಲಿಂಪಿಕ್ ಗೆ ಶುಭ ಸೂಚನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಈ ಕುರಿತು ಏಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, 'ಏಷ್ಯನ್ ಗೇಮ್ಸ್ನಲ್ಲಿ ಭಾರತ ಈ ಬಾರಿ 28 ಚಿನ್ನ, 38 ರಜತ ಹಾಗೂ 41 ಕಂಚಿನ ಪದಕಗಳೊಂದಿಗೆ ಒಟ್ಟು 107 ಪದಕಗಳ ಅಭೂತಪೂರ್ವ ಸಾಧನೆಗೈದಿದೆ. ಪದಕ ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆಗಳು. ತಮ್ಮ ಸಾಧನೆ ಪ್ರತಿ ಭಾರತೀಯನಿಗೂ ಹೆಮ್ಮೆಯುಂಟುಮಾಡಿದೆ ಎಂದಿದ್ದಾರೆ.
ಇನ್ನು ಭಾರತೀಯ ಕ್ರೀಡಾಪಟುಗಳ ಈ ಅಮೋಘ ಸಾಧನೆ ಮುಂದಿನ ಒಲಿಂಪಿಕ್ಗೆ ಶುಭ ಸೂಚನೆ ಎಂದು ಭಾವಿಸಿದ್ದೇನೆ. ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೇಶವನ್ನು ಪ್ರತಿನಿಧಿಸಿದ ಎಲ್ಲಾ ಕ್ರೀಡಾಳುಗಳಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.