ಬಿಹಾರ, ಅ 09 (DaijiworldNews/HR): ಸಣ್ಣ ವಯಸ್ಸಿನಲ್ಲಿಯೇ ತಮ್ಮ ವಯಸ್ಸಿಗೂ ಮೀರಿದ ಪ್ರತಿಭೆ ಪ್ರದರ್ಶಿಸಿದ ತಥಾಗತ ಅವತಾರ ತುಳಸಿ ಅತ್ಯಂತ ಕಿರಿಯ ಪ್ರತಿಭಾವಂತರು ಎಂದು ಹೆಸರುವಾಸಿಯಾದವರು.
ಸೆಪ್ಟೆಂಬರ್ 9, 1987 ರಂದು ಬಿಹಾರದಲ್ಲಿ ಜನಿಸಿದ ತಥಾಗತ ಅವತಾರ ತುಳಸಿ. ಖ್ಯಾತ ಭೌತಶಾಸ್ತ್ರಜ್ಞರಾಗಿ ಹೆಸರುವಾಸಿಯಾದವರು. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಹೈಸ್ಕೂಲ್, ಪದವಿ, ಸ್ನಾತಕೋತ್ತರ ಮತ್ತು 21 ವರ್ಷದಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಪ್ರತಿಭಾವಂತರು.
ಸರ್ವೋಚ್ಚ ನ್ಯಾಯಾಲಯದ ವಕೀಲ ತುಳಸಿ ನಾರಾಯಣ ಪ್ರಸಾದ್ ಅವರ ಪುತ್ರ, ಅವರ ಪೋಷಕರು ಚಿಕ್ಕ ವಯಸ್ಸಿನಲ್ಲೇ ಅವರ ಕಲಿಕೆಯ ವೇಗವನ್ನು ಗಮನಿಸಿ ಪುತ್ರನಿಗೆ ಪ್ರೋತ್ಸಾಹ ನೀಡಿದರು.
ತುಳಸಿ ಅವರು ಕೇವಲ 9 ವರ್ಷದವರಾಗಿದ್ದಾಗ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಹಾಗೂ ಹನ್ನೊಂದರ ಹರೆಯದಲ್ಲಿ ಬಿಎಸ್ಸಿ ಪದವಿ ಪಡೆದರು ಹಾಗೂ 12 ನೇ ವಯಸ್ಸಿನಲ್ಲಿ ಪಾಟ್ನಾ ವಿಜ್ಞಾನ ಕಾಲೇಜಿನಲ್ಲಿ MSc ಅನ್ನು ಪೂರ್ಣಗೊಳಿಸಿದರು.
ತಮ್ಮ MSc ಮುಗಿಸಿದ ನಂತರ, ತಥಾಗತ ಅವತಾರ ತುಳಸಿ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಹೋದರು ಮತ್ತು 2009 ರಲ್ಲಿ 21 ನೇ ವಯಸ್ಸಿನಲ್ಲಿ ತಮ್ಮ ಪಿಎಚ್ಡಿ ಪೂರ್ಣಗೊಳಿಸಿದರು. ಜುಲೈ 2010 ರಲ್ಲಿ, IIT-ಮುಂಬೈ ಅವರು ಗುತ್ತಿಗೆಯ ಮೇಲೆ ಸಹಾಯಕ ಪ್ರಾಧ್ಯಾಪಕರಾಗಿ (ತಾಜಾ ಪಿಎಚ್ಡಿ ಪದವೀಧರರಿಗೆ ಶಾಶ್ವತವಲ್ಲದ ಬೋಧನಾ ಹುದ್ದೆ) ಸ್ಥಾನವನ್ನು ನೀಡಿತು. ಆದಾಗ್ಯೂ 2019 ರಲ್ಲಿ ತುಳಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತು ಮತ್ತು ತುಳಸಿಯವರು ತಿಳಿಸಿರುವಂತೆ, ಅವರು ಅನಾರೋಗ್ಯದ ಕಾರಣ ದೀರ್ಘ ರಜೆ ತೆಗೆದುಕೊಂಡ ನಂತರ ಸಂಸ್ಥೆಯು ಅವರ ಉದ್ಯೋಗವನ್ನು ಕೊನೆಗೊಳಿಸಲು ನಿರ್ಧರಿಸಿತ್ತು ಎಂದು ತಿಳಿಸಿದ್ದಾರೆ.
ತುಳಸಿ ತಮ್ಮ 17 ನೇ ವಯಸ್ಸಿನಲ್ಲಿ ತನ್ನ ಪಿಎಚ್ಡಿ ಕಾರ್ಯಕ್ರಮಕ್ಕಾಗಿ ಐಐಎಸ್ಸಿಗೆ ಹೋದಾಗ, ಭೌತಶಾಸ್ತ್ರ ವಿಭಾಗದ ಆಗಿನ ಡೀನ್ ಅವನನ್ನು ತುಳಸಿ ಒಳ್ಳೆಯ ಹುಡುಗ, ಪ್ರತಿಭಾವಂತ ತುಂಬಾ ಪ್ರೀತಿಪಾತ್ರ ಮತ್ತು ಅವನ ಗುರಿಗಳನ್ನು ಸಾಧಿಸಲು ಕೆಲಸ ಮಾಡುತ್ತಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
2001 ರಲ್ಲಿ ಭಾರತ ಸರ್ಕಾರವು ಜರ್ಮನಿಯಲ್ಲಿ ನೊಬೆಲ್ ಪ್ರಶಸ್ತಿ ವಿಜೇತರ ಸಮ್ಮೇಳನದಲ್ಲಿ ಭಾಗವಹಿಸಲು ಅವರನ್ನು ಶಾರ್ಟ್ಲಿಸ್ಟ್ ಮಾಡಿದಾಗ ತುಳಸಿ ಎಲ್ಲರ ಗಮನಸೆಳೆದರು.
2013 ರಲ್ಲಿ ಪಾಟ್ನಾಗೆ ತೆರಳಿದರು ಮತ್ತು ಅಂದಿನಿಂದ ಪಾಟ್ನಾದಲ್ಲಿ ವಾಸಿಸುತ್ತಿದ್ದಾರೆ. 2019 ರಲ್ಲಿ, ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಯಿತು. ತುಳಸಿ ಪ್ರಸ್ತುತ ಉದ್ಯೋಗವಿಲ್ಲದೆ ಮತ್ತು ಈಗ ಕಾನೂನು ಓದುತ್ತಿದ್ದಾರೆ.