ಛತ್ತೀಸ್ಗಢ, ಅ 10 (DaijiworldNews/HR): ನಮ್ಮ ಸತತ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ UPSC ಪರೀಕ್ಷೆಯಲ್ಲಿ 203 ರ್ಯಾಂಕ್ ಗಳಿಸಿದ ಅಂಕಿತಾ ಶರ್ಮಾ ಅವರೇ ಸಾಕ್ಷಿ. ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿರುವ ಯುಪಿಎಸ್ ಸಿ ಅನ್ನು ಮೂರನೇ ಪ್ರಯತ್ನದಲ್ಲಿ 203ನೇ ರ್ಯಾಂಕ್ ಗಳಿಸುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.
ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಐಎಸ್, ಐಪಿಎಸ್, ಹಾಗೂ ಐಎಫ್ ಎಸ್ ಅಧಿಕಾರಿಗಳಾಗಬೇಕು ಎನ್ನುವುದು ಬಹಳ ಜನರ ಕನಸಾಗಿರುತ್ತದೆ, ಆದರೆ ಆ ಅವಕಾಶ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅದನ್ನು ನನಸಾಗಿಸಲು ಸಾಧ್ಯವಾಗುತ್ತದೆ.
IPS ಅಂಕಿತಾ ಶರ್ಮಾ ಅವರು ಛತ್ತೀಸ್ಗಢ ಕೇಡರ್ನ 2018 ರ ಬ್ಯಾಚ್ IPS ಅಧಿಕಾರಿ. ಅವರು ಪ್ರಸ್ತುತ ಖೈರಾಘರ್-ಚುಯಿಖಾದನ್-ಗಂಡೈ ಜಿಲ್ಲೆಯ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ಅಂಕಿತಾ ಈ ಹಿಂದೆ ಬಸ್ತಾರ್ನಲ್ಲಿ ನಡೆದ ಹಲವು ನಕ್ಸಲೀಯ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದು, IPS ಅಧಿಕಾರಿಯು 2018 ರಲ್ಲಿ ತನ್ನ ಮೂರನೇ ಪ್ರಯತ್ನದಲ್ಲಿ UPSC CSE ಪರೀಕ್ಷೆಯನ್ನು ಭೇದಿಸಿ ಅವರು ಆಲ್ ಇಂಡಿಯಾ ರ್ಯಾಂಕ್ (AIR) 203 ಅನ್ನು ಪಡೆದುಕೊಂಡಿದ್ದಾರೆ.
UPSC ಓದಲು ಅಂಕಿತಾ ಶರ್ಮಾ ಅವರು ದೆಹಲಿಗೆ ತೆರಳಿದ್ದು, ತನ್ನ ಆರಂಭಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದು ಬಳಿಕ ಹುಟ್ಟೂರಿನಲ್ಲೇ ಪದವಿ ಪಡೆದು ಎಂಬಿಎ ಮುಗಿಸಿದ್ದಾರೆ.
ಇನ್ನು ಅಂಕಿತಾ ಶರ್ಮಾ ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿರುವ ವಿವೇಕಾನಂದ ಶುಕ್ಲಾ ಅವರನ್ನು ವಿವಾಹವಾಗಿದ್ದಾರೆ.