ಶಿವಮೊಗ್ಗ, ಅ 12 (DaijiworldNews/HR): ಲಾಂಗು, ಮಚ್ಚು ತೋರಿಸಿದವರ ಎಷ್ಟು ಜನರ ಮೇಲೆ ಕೇಸ್ ಹಾಕಿದ್ದಿರಿ? ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಕುತಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯೆ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೆ? ಈ ದೇಶದ ಮುಸಲ್ಮಾನರು ಭಾರತದ ಭೂಪಟಕ್ಕೆ ಹಸಿರು ಬಣ್ಣ ಬಳಿದಿದ್ದು ಸಿದ್ದರಾಮಯ್ಯನವರೇ ನಿಮಗೆ ತಾಕತ್ತಿದ್ದರೆ ನಿಮಗೆ ಹಸಿರು ಬೇಕೋ ಏನು ಆರಿಸಿಕೊಳ್ಳಿ ಎಂದರು.
ಇನ್ನು ಡಿಸಿ, ಎಸ್ಪಿ ಅವರೇ ಎಷ್ಟು ದಿನ ಕಾಂಗ್ರೆಸ್ ನ ಗುಲಾಮರಾಗುತ್ತಿರಿ? ಹರ್ಷನ ಕೊಲೆಯಾದಾಗ ನಾವು ಸಹ ಲಾಂಗು ಮಚ್ಚು ಹಿಡಿದಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದು ಹಾಕುವಂತೆ ಹಾಕುತ್ತಿದ್ದೆವು, ಆದರೆ ನಾವು ಅದನ್ನು ಮಾಡಲಿಲ್ಲ. ಓಂ ಚಿತ್ರವನ್ನು ಸಿದ್ದರಾಮಯ್ಯನವರಿಗೆ ತೋರಿಸಬೇಕು. ಶಾಂತಿಯಿಂದ ಸಭೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.