ಮೈಸೂರು,ಅ 14 (DaijiworldNews/MS): ಒಕ್ಕಲಿಗರು ಸಂಸ್ಕೃತಿ ಹೀನರು' ಅಂಥ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ. ಭಗವಾನ್ ಅವರ ಮೈಸೂರಿನ ಕುವೆಂಪು ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಯಬಹುದಾದ ಶಂಕೆಯಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ ಕುವೆಂಪು ನಗರದಲ್ಲಿರುವ ಅವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಆದರೆ ಈ ನಡುವೆ ಒಕ್ಕಲಿಗರ ಸಂಘದವರು ಭಗವಾನ್ ಮನೆ ಮೇಲೆ ಮುತ್ತಿಗೆ ಹಾಕಲೆಂದು ಬಂದಿದ್ದು, ಈ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇಂದು ಬೆಳಗ್ಗೆಯೇ ಮೈಸೂರು ಚಾಮರಾಜನಗರದ ಒಕ್ಕಲಿಗರ ಸಂಘದವರು ಮುತ್ತಿಗೆ ಹಾಕಿ ಪ್ರೊ. ಭಗವಾನ್ ಅವರ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಆದರೆ ಮನೆಯ ಮೇಲೆ ದಾಳಿ ನಡೆಯಬಹುದಾದ ಶಂಕೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಕುವೆಂಪು ನಗರದಲ್ಲಿರುವ ಅವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅವರ ಮನೆ ಸುತ್ತ ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ನೀಡಿದ್ದರು.