ಬೆಂಗಳೂರು, ಅ 17 (DaijiworldNews/HR): ಚಿಕ್ಕಪುಟ್ಟ ವಸ್ತುಗಳನ್ನು ಮಾರಾಟ ಮಾಡಿ ದಿನಕ್ಕೆ 20 ರೂಪಾಯಿಗಳನ್ನು ಸಂಪಾದಿಸುತ್ತಿದ್ದ ಯುವತಿಯೊಬ್ಬಳು ಈಗ 100 ಕೋಟಿಯ ಒಡತಿಯಾಗಿದ್ದು, ಇದು ಪ್ರಸಿದ್ಧ ಫ್ಯಾಷನ್ ಆಭರಣ ಬ್ರ್ಯಾಂಡ್ ಆದ ರುಬನ್ಸ್ ಅಕ್ಸೆಸೇರಿಸ್ ನ ನಿರ್ದೇಶಕಿ ಚಿನು ಕಲಾ ಅವರ ಕಥೆ.
ಚಿನು ಕಲಾ ಅವರು 15ನೇ ವಯಸ್ಸಿನಲ್ಲಿ ತನ್ನ ಮನೆಯನ್ನು ತೊರೆದಿದ್ದು, ಆಗ ಆಕೆಯ ಬ್ಯಾಗ್ ನಲ್ಲಿದ್ದುದ್ದು ಕೇವಲ 300 ರೂಪಾಯಿ ಮತ್ತು ಕೆಲವು ಬಟ್ಟೆಗಳು ಮಾತ್ರ ಅಂತೆ. ಆಕೆ ಮನೆಯಿಂದ ಹೊರ ಬಂದ ನಂತರ ಎರಡು ದಿನಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದರಂತೆ. ಆಗ ಆಕೆ ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲಿಯೇ ಏನಾದರೂ ಚಿಕ್ಕಪುಟ್ಟ ವಸ್ತುಗಳನ್ನು ಮಾರಾಟ ಮಾಡಿ ದಿನಕ್ಕೆ 20 ರೂಪಾಯಿಗಳನ್ನು ಸಂಪಾದಿಸುತ್ತ ಇದ್ದರಂತೆ.
ಆದರೆ ಚಿನು ಕಲಾ ಅವರು ಈಗ ಬೆಂಗಳೂರಿನಲ್ಲಿ 5000 ಚದರ ಅಡಿ ವಿಸ್ತೀರ್ಣದ ಮನೆಯೊಂದರಲ್ಲಿ ವಾಸವಾಗಿದ್ದು, ಬಿಎಂಡಬ್ಲ್ಯು 5 ಸೀರಿಸ್ ಕಾರ್ ನಲ್ಲಿ ಓಡಾಡ್ತಾರೆ.
ಇನ್ನು ಬೆಂಗಳೂರು ಮಾಲ್ ನ ಸಣ್ಣ ಅಂಗಡಿಯಿಂದ ಚಿನು ಕಲಾ ಅವರು ಕೆಲಸ ಪ್ರಾರಂಭಿಸಿ ತಮ್ಮ ಬ್ರ್ಯಾಂಡ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸಲು ದಿನಕ್ಕೆ 15 ಗಂಟೆ ಕೆಲಸ ಮಾಡ್ತಾರಂತೆ.
ಚಿನು ಅವರು 15 ವರ್ಷದವಳಿದ್ದಾಗ ತನ್ನ ಮನೆಯನ್ನು ತೊರೆದಿದ್ದರಿಂದ ಬರೀ 10ನೇ ತರಗತಿ ಓದಿದ್ದರು ಅಷ್ಟೆ ಆದರೆ ಸತತ್ ಪ್ರಯತ್ನದಿಂದ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿ ಅಗ್ರ 10 ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು.
ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿದ್ದರು ಮತ್ತು ಅಗ್ರ 10 ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು. ಅವರು 2004 ರಲ್ಲಿ ಅಮಿತ್ ಎಂಬುವವರನ್ನು ವಿವಾಹವಾದರು.
3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ರುಬಾನ್ ಅಕ್ಸೆಸೇರಿಸ್ ಅನ್ನು ಪ್ರಾರಭಿಸಿದ ಚಿನು 2018 ರ ಹೊತ್ತಿಗೆ ಐದು ಕಿಯೋಸ್ಕ್ ಗಳನ್ನು ನಡೆಸುತ್ತಿದ್ದರು. ಹೀಗೆ ಬೆಳೆದ ಕಂಪನಿಯ ಮೌಲ್ಯ ಇಂದಿಗೆ 100 ಕೋಟಿ ರೂಪಾಯಿಗೆ ಏರಿದೆ.