ಚೆನ್ನೈ, ಅ 17 (DaijiworldNews/Ak): ತಾಯಿ ಜೊತೆಗಿದ್ದ ಒಂದೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣವನ್ನು 5 ಗಂಟೆಯಲ್ಲಿ ಪೊಲೀಸರು ಬೇಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಒಡಿಶಾ ಮೂಲದ ನಂದಿನಿ ಕನ್ಹರ್ ತನ್ನ ಒಂದುವೂರೆ ವರ್ಷದ ಮಗ ಆಯುಷ್ ನೊಂದಿಗೆ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದರು. ಇನ್ನೇನು ರೈಲು ಹತ್ತಬೇಕು ಅನ್ನುವಷ್ಟರಲ್ಲಿ ಯಾರೋ ಬಂದು ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ. ಮಗುವನ್ನು ಅತ್ತಿತ್ತ ಹುಡುಕಿದ ತಾಯಿ ನಂದಿನಿ ಕೊನೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿ ನೀಡಿದ ಬಳಿಕ ಪೊಲೀಸರು ರೈಲ್ವೇ ನಿಲ್ದಾಣ ಹಾಗೂ ಆ ಪ್ರದೇಶದಲ್ಲಿನ ಎಲ್ಲಾ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ನಂದಿನಿ ನಿಂತಿರುವ ಬಳಿ ಇಬ್ಬರು ಬಂದು ಮಗುವನ್ನು ಹಿಡಿದುಕೊಂಡು ಆಟೋ ಹತ್ತಿದ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ.
ಅಲ್ಲದೇ ಮಗುವನ್ನು ಆಟೋ ಹತ್ತಿದ್ದ ಇಬ್ಬರು ವಾಲ್ ಟ್ಯಾಕ್ಸ್ ರಸ್ತೆ ಕಡೆ ಹೋಗುವುದನ್ನು ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದಾರೆ. ಆ ಬಳಿಕ ಪೊಲೀಸರು ಆಟೋ ರಿಕ್ಷಾದ ಜಾಡು ಹಿಡಿದು ಹಿಂಬಾಲಿಸಿದ್ದಾರೆ. ಕುಂದ್ರತ್ತೂರಿನಲ್ಲಿ ಇಳಿಯುವುದನ್ನು ಪೊಲೀಸರು ನೋಡಿದ್ದಾರೆ.
ಸ್ಥಳಕ್ಕೆ ತಲುಪಿದ ಪೊಲೀಸರು ಮಗುವನ್ನು ವಶಪಡೆದು, ಜಾರ್ಖಂಡ್ ಮೂಲದ ಪ್ರಭಾಸ್ ಮೊಂಡಲ್ ಮತ್ತು ನಮಿತಾ ಎನ್ನುವ ದಂಪಪತಿಯನ್ನು ಬಂಧಿಸಿದ್ದಾರೆ.
ಮಗು ಅಪಹರಣದಲ್ಲಿ ಬೇರೆ ಯಾರಾದರೂ ಶಮೀಲಾಗಿದ್ದಾರಾ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.