ನವದೆಹಲಿ,ಅ 17 (DaijiworldNews/AK): ಏರ್ಏಷ್ಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟೋನಿ ಫೆರ್ನಾಂಡಿಸ್ ಅವರು ತಮ್ಮ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಶ್ಲಾಘಿಸಲು ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಲಿಂಕ್ಡ್ಇನ್ಗೆ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.
ಅರೆಬೆತ್ತಲಾಗಿ ಮ್ಯಾನೇಜ್ ಮೆಂಟ್ ಮೀಟಿಂಗ್ನಲ್ಲಿ ಕುಳಿತು ಮಸಾಜ್ ಮಾಡಿಸಿಕೊಳ್ಳವುದನ್ನು ಕಾಣಹುದಾಗಿದೆ. ಅಲ್ಲದೇ ಇದು ಮಸಾಜ್ ಪಡೆಯಲು ಮತ್ತು ಮ್ಯಾನೇಜ್ಮೆಂಟ್ ಸಭೆಯಲ್ಲಿ ಒಟ್ಟಿಗೆ ಹಾಜರಾಗಲು ಅನುವು ಮಾಡಿಕೊಡುತ್ತದೆ ಎಂದು ಟೋನಿ ಹೇಳಿದ್ದಾರೆ. ಆದರೆ ಏರ್ ಏಷ್ಯಾ ಸಿಇಒ ನಡೆಗೆ ವ್ಯಾಪಾಕ ಟೀಕೆ ವ್ಯಕ್ತವಾಗಿದೆ.
ಒತ್ತಡದ ವಾರವಾಗಿತ್ತು ಮತ್ತು ವೆರಾನಿಟಾ ಯೋಸೆಫಿನ್ ಮಸಾಜ್ ಮಾಡಲು ಸಲಹೆ ನೀಡಿದರು. ಇಂಡೋನೇಷ್ಯಾ ಮತ್ತು ಏರ್ ಏಷ್ಯಾ ಸಂಸ್ಕೃತಿಯನ್ನು ಪ್ರೀತಿಸಲು ನಾನು ಮಸಾಜ್ ಮಾಡಬಲ್ಲೆ ಮತ್ತು ಮ್ಯಾನೇಜ್ಮೆಂಟ್ ಮೀಟಿಂಗ್ ಮಾಡಬಲ್ಲೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಅವರ ಈ ಪೋಸ್ಟ್ ಇಂಟರ್ನೆಟ್ನಲ್ಲಿ ಬಹಳಷ್ಟು ಜನರಿಂದ ಟೀಕೆಗೆ ಒಳಗಾಗಿದೆ ಮತ್ತು ಅದು "ಅನುಚಿತವಾಗಿ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಂಡಾಗಿನಿಂದ, ಪೋಸ್ಟ್ ಗೆ 576 ಲೈಕ್ ಮತ್ತು ಹಲವಾರು ಚಿತ್ರವನ್ನು ನೋಡಿ ಕನಿಷ್ಠ ಫೋಟೋಗಾಗಿ ಶರ್ಟ್ ಅನ್ನು ಹಾಕಿ ಎಂದು ನಾನು ಭಾವಿಸುತ್ತೇನೆ" ಎಂದುಕಾಮೆಂಟ್ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಕೆಲವು ಬಳಕೆದಾರರು ಸಿಇಒ ಅವರನ್ನು ಪ್ರಭಾವಶಾಲಿ ಕೆಲಸಕ್ಕಾಗಿ ಶ್ಲಾಘಿಸಿದ್ದಾರೆ.ಈ ಬಾಸ್ ಅನ್ನು ಪ್ರೀತಿಸಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.