ಕೊಡಗು, ಅ 18 (DaijiworldNews/MS): ಕೊಡಗಿನ ತಲಕಾವೇರಿಯಲ್ಲಿ ನಿರೀಕ್ಷೆಯಂತೆ ಕರ್ಕಾಟಕ ಲಗ್ನದಲ್ಲಿ ನಿನ್ನೆ ರಾತ್ರಿ 1 ಗಂಟೆ 26 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುವ ಮೂಲಕ ಕಾವೇರಿಯ ದರ್ಶನವಾಗಿದೆ. ನಿಗದಿತ ಸಮಯಕ್ಕೂ ಒಂದು ನಿಮಿಷ ಮೊದಲೇ ತೀರ್ಥ ಉದ್ಭವವಾಗಿದ್ದು, ಸಾವಿರಾರು ಭಕ್ತರು ಕಾವೇರಿ ಮಾತೆಯನ್ನು ನೆನೆದು ಕಣ್ತುಂಬಿಕೊಂಡರು.
ಭಕ್ತರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗಮಂಡಲದಿಂದ ತಲಕಾವೇರಿ ವರೆಗೆ ಸುಮಾರು 8 ಕಿಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದರು. ಸಾವಿರಾರು ಭಕ್ತರು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡರು.
ಕೊಡಗು ಉಸ್ತುವಾರಿ ಸಚಿವ ಬೋಸರಾಜ್, ಸಂಸದ ಪ್ರತಾಪ್ ಸಿಂಹ ಮುಂತಾದವರು ಉಪಸ್ಥಿತರಿದ್ದರು.