ನವದೆಹಲಿ, ಅ 18 (DaijiworldNews/HR): ವಿದ್ಯುತ್ ಬೆಲೆ ಹೆಚ್ಚಳದ ಹಿಂದೆ ಅದಾನಿ ಗ್ರೂಪ್ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಗ್ರೂಪ್ ಕಲ್ಲಿದ್ದಲು ಆಮದುಗಳನ್ನು ಅತಿಯಾಗಿ ಇನ್ವಾಯ್ಸ್ ಮಾಡಿದ್ದು, ಈ ಪ್ರಕ್ರಿಯೆಯಲ್ಲಿ ಅದಾನಿ ಸಮೂಹವು ಜನರಿಂದ ಒಟ್ಟು 32,000 ಕೋಟಿ ರೂ ಹಗರಣ ಮಾಡಿದೆ ಎಂದರು.
ಇನ್ನು ಗೌತಮ್ ಅದಾನಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಅದು ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಹಾಗಾಗಿ ಅವರು ಭಾರತದ ಬಡ ಜನರ ಜೇಬಿನಿಂದ ಸರಿಸುಮಾರು 32,000 ಕೋಟಿ ರೂ. ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ವಿದ್ಯುತ್ ಸಬ್ಸಿಡಿ ನೀಡಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಅದೇ ರೀತಿ ಮಾಡುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದ್ದಾರೆ.