ಬೆಂಗಳೂರು, ಅ 20 (DaijiworldNews/HR): ಕರ್ನಾಟಕದಲ್ಲಿ ಕಳೆದ ಮೂರು ತಿಂಗಳಿಂದ ಮದ್ಯ ಮಾರಾಟ ಇಳಿಮುಖವಾಗಿದ್ದು, ಹೆಚ್ಚು ಆದಾಯ ತಂದುಕೊಡುತ್ತಿದ್ದ ಇಲಾಖೆ ಭಾರೀ ನಷ್ಟದಲ್ಲಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬರೊಬ್ಬರಿ 5% ರಷ್ಟು ಮದ್ಯ ಮಾರಟ ಇಳಿಕೆ ಕಂಡಿದ್ದು, ಕಳೆದ ಜುಲೈ ತಿಂಗಳ ಬಳಿಕ ರಾಜ್ಯದಲ್ಲಿ ಮದ್ಯ ಖರೀದಿ ಇಳಿಕೆಯಾಗಿದೆ.
ಈ ಕುರಿತು ಬೆಂಗಳೂರು ಬಾರ್ ಮಾಲೀಕರ ಸಂಘ ಮಾಹಿತಿ ಹಂಚಿಕೊಂಡಿದ್ದು, ಕೆಲ ತಿಂಗಳ ಹಿಂದಷ್ಟೇ ರಾಜ್ಯದಲ್ಲಿ 20% ಅಬಕಾರಿ ಸುಂಕವನ್ನ ಏರಿಕೆ ಮಾಡಲಾಗಿತ್ತು. ಇದು ಮದ್ಯ ಪ್ರಿಯರಿಗೆ ಶಾಕ್ ನೀಡಿದೆ ಎಂದು ತಿಳಿಸಿದೆ.
ಇನ್ನು ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಸುಮಾರು 180 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟ ಕಡಿಮೆಯಾಗಿ ಎನ್ನಲಾಗಿದೆ.