ನವದೆಹಲಿ, ಅ 20 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ.20) ಉತ್ತರ ಪ್ರದೇಶದಲ್ಲಿ ಭಾರತದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ‘ನಮೋ ಭಾರತ್’ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಉತ್ತರ ಪ್ರದೇಶದ ಸಾಹಿಬಾಬಾದ್ ಮತ್ತು ದುಹೈ ಡಿಪೋ ನಿಲ್ದಾಣಗಳನ್ನು 'ನಮೋ ಭಾರತ್' ಸಂಪರ್ಕಿಸುತ್ತದೆ. 'ನಮೋ ಭಾರತ್' ಪ್ರಾದೇಶಿಕ ಕ್ಷಿಪ್ರ ರೈಲು ಸೇವೆ (ಆರ್ಆರ್ಟಿಎಸ್)ಯಾಗಿದ್ದು, ಇದು ಇಂಟರ್ಸಿಟಿ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿದೆ.
ರೈಲು ಸೇವೆಯ ಹೆಸರನ್ನು ನಿನ್ನೆ RapidX ನಿಂದ NaMo Bharat ಗೆ ಬದಲಾಯಿಸಲಾಗಿದೆ.
ಆರ್ಆರ್ಟಿಎಸ್ ಅನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಅತ್ಯಾಧುನಿಕ ಪ್ರಾದೇಶಿಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಿದೆ. ದೆಹಲಿ-ಮೀರತ್ ಕಾರಿಡಾರ್ನ ಒಟ್ಟು ಉದ್ದ 82 ಕಿಲೋಮೀಟರ್ ಆಗಿದ್ದು, ರ್ಯಾಪಿಡ್ಎಕ್ಸ್ ರೈಲು 1 ಗಂಟೆಯಲ್ಲಿ ದೆಹಲಿಯಿಂದ ಮೀರತ್ಗೆ ಸಂಚರಿಸುತ್ತದೆ.
ದೆಹಲಿ-ಗಾಜಿಯಾಬಾದ್-ಮೀರತ್ RRTS ಕಾರಿಡಾರ್ನ 17-ಕಿಮೀ ಆದ್ಯತೆಯ ವಿಭಾಗವು ಉದ್ಘಾಟನೆಯ ಒಂದು ಬಳಿಕ ನಂತರ ಅಂದರೆ ನಾಳೆಯಿಂದ ಪ್ರಯಾಣಿಕರಿಗೆ ಲಭ್ಯವಾಗಲಿದೆ.