ಕುಷ್ಟಗಿ,ಅ 20 (DaijiworldNews/AK): ಬರಗಾಲದಿಂದ ಪರಿತಪಿಸುವ ರೈತರಿಗೆ ಪರಿಹಾರ ಕೊಡಲು ಯೋಚನೆ ಮಾಡುವ ಕಾಂಗ್ರೆಸ್ ಸರ್ಕಾರ, ತನ್ನ ಮಂತ್ರಿಗಳಿಗೆ ಗೂಟದ ಕಾರು ಅವಶ್ಯಕತೆ ಇಲ್ಲದೇ ಇದ್ದರೂ, ಬರಗಾಲದ ಸಂದರ್ಭದಲ್ಲಿ ಹೊಸ ಕಾರು ನೀಡುವ ಅವಶ್ಯಕತೆಯಿದೆಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ಬಂದಾಗಿನಿಂದಲೂ ಅವಾಂತರಗಳು ನಡೆಯುತ್ತಿವೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆ ಇಲ್ಲದೇ ಪರಿತಪಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಗತ್ಯವೇನು ಅರಿಯದೇ ರೈತರಿಗೆ ಸದ್ಯದ ಅವಶ್ಯಕತೆಯ ಬಗ್ಗೆ ಚರ್ಚಿಸಿಲ್ಲ ಸರ್ಕಾರದ ಆದ್ಯತೆ ಮಂತ್ರಿಗಳು ಶಾಸಕರೇ ಹೊರತು ರೈತರು, ಬಡವರು, ಜನಸಾಮಾನ್ಯರಲ್ಲ. ಇದು ನಮ್ಮ ರಾಜ್ಯದ ದುರದೃಷ್ಟವಾಗಿದೆ ಎಂದರು.
ಬರಗಾಲದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಈ ರೀತಿಯ ನಡೆ ದುರದೃಷ್ಟಕರವಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳಾಗಿದ್ದು ಮೊನ್ನೆ ಸಿಕ್ಕ 150 ಕೋಟಿ ರೂ. ಬರೀ ಸ್ಯಾಂಪಲ್ .ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಬಹಿರಂಗವಾಗುವುದರಲ್ಲಿ ಸಂದೇಹವಿಲ್ಲ ಎಂದರು.