ಗುಜರಾತ್, ಅ 22 (DaijiworldNews/HR): ಕಠಿಣ ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಮುನ್ನುಗಿದ್ದರೂ ಯಶಸ್ಸು ಕಂಡಿತ. ಈ ರೀತಿ ಯಶಸ್ಸು ಕಂಡ ಉದ್ಯಮಿಗಳಲ್ಲಿ ಗುಜರಾತ್ನ ಡೈಮಂಡ್ ರಾಜಾ ಅಥವಾ ಕಾಕಾ ಎಂದು ಖ್ಯಾತರಾಗಿರುವ ಗೋವಿಂದ್ ಧೋಲಾಕಿಯಾ ಕೂಡ ಒಬ್ಬರು.
ಬಡ ಕೃಷಿ ಕುಟುಂಬದಲ್ಲಿ ಜನಿಸಿದ್ದ ಗೋವಿಂದ್ ಧೋಲಾಕಿಯಾ ಅವರು ತಮ್ಮ ಕೈಯಲ್ಲಿ 500 ರೂ. ಇಟ್ಟುಕೊಂಡು, 410 ರೂ ಸಾಲ ಪಡೆದು ಪ್ರಾರಂಭಿಸಿದ ವ್ಯವಹಾರ ಇಂದು 5,000 ಕೋಟಿ ರೂ ಮೌಲ್ಯದ ಉದ್ದಿಮೆಯಾಗಿ ಬೆಳೆದು ನಿಂತಿದೆ.
1947 ನವೆಂಬರ್ 7ರಂದು ಕೃಷಿಕರ ಕುಟುಂಬದಲ್ಲಿ ಹುಟ್ಟಿದ ಗೋವಿಂದ್ ಧೋಲಾಕಿಯಾ ಇವರು 17ರ ವಯಸ್ಸಿನಲ್ಲಿ ಕೆಲಕ್ಕೆ ಹೋಗುವ ಅನಿವಾರ್ಯತೆ ಬಂದಿದ್ದರಿಂದ ಸೂರತ್ನಲ್ಲಿ ಡೈಮಂಡ್ ಕಟ್ಟರ್ ಮತ್ತು ಪಾಲಿಶರ್ ಕೆಲಸಕ್ಕೆ ಸೇರುತ್ತಾರೆ. ಹೀಗೆ ಕೆಲಸ ಮಾಡುತ್ತಾ ಗೋವಿಂದ್ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಸ್ವಂತವಾಗಿ ಡೈಮಂಡ್ ಕಟ್ಟರೆ ಕೆಲಸ ಆರಂಬಿಸುತ್ತಾರೆ.
ಇನ್ನು ಚಿಕ್ಕದೊಂದು ರೂಮು ಬಾಡಿಗೆಗೆ ಪಡೆದು ಎಸ್ಆರ್ಕೆ (ಶ್ರೀ ರಾಮ ಕೃಷ್ಣ) ಎಕ್ಸ್ಪೋರ್ಟ್ ಎಂಬ ಕಂಪನಿ ಸ್ಥಾಪಿಸುತ್ತಾರೆ. ಆದರೆ ಆ ಸಮಯದಲ್ಲಿ ಡೈಮಂಡ್ ಕಟ್ಟಿಂಗ್ ಮತ್ತು ಪಾಲಿಶ್ ಕಾರ್ಯದಲ್ಲಿ ಬಹಳ ಮಂದಿ ತೊಡಗಿದ್ದರಿಂದ ಗೋವಿಂದ್ ಮತ್ತು ಸ್ನೇಹಿತರಿಗೆ ತೀರಾ ಹೆಚ್ಚಿನ ಬ್ಯುಸಿನೆಸ್ ನಿರೀಕ್ಷೆ ಇರಲಿಲ್ಲ. ಹಾಗಾಗಿ ಗೋವಿಂದ್ ಧೋಲಾಕಿಯಾಗೆ ತಾನೇ ನೇರವಾಗಿ ಕಚ್ಛಾ ವಜ್ರಗಳನ್ನು ಖರೀದಿಸಿ ವಜ್ರ ತಯಾರಿಕೆ ಮಾಡುವ ಎಂದು ಯೋಚಿಸುತ್ತಾರೆ.
ವಜ್ರ ತಯಾರಿಕೆಗೆ ಬೇಕಾದ ರಫ್ ಡೈಮಂಡ್ ಅನ್ನು ಖರೀದಿಸಲು ವ್ಯಾಪಾರಿಯೊಬ್ಬರ ಬಳಿ ಹೋಗುತ್ತಾರೆ. ಆದರೆ ಅವರಲ್ಲಿ ಕೇವಲ 500 ರೂ ಮಾತ್ರವೇ ಇತ್ತು. ಅವರ ಅದೃಷ್ಟಕ್ಕೆ ವ್ಯಾಪಾರಿಯು ಉಳಿದ ಹಣವನ್ನು ಮನೆಗೆ ಹೋಗಿ ತೆಗೆದುಕೊಂಡು ಬಂದು ಕೊಡುವಂತೆ ಹೇಳಿ ರಫ್ ಡೈಮಂಡ್ ಕೊಟ್ಟು ಕಳುಹಿಸುತ್ತಾರೆ. ಗೋವಿಂದ್ ಕಚ್ಛಾ ವಜ್ರದೊಂದಿಗೆ ಮನೆಗೆ ಹೋಗಿ ತನ್ನ ಇಬ್ಬರು ಸ್ನೇಹಿತರಿಂದ 410 ರೂ ಸಾಲ ಮಾಡಿ ಆ ವ್ಯಾಪಾರಿಗೆ ಕೊಡುತ್ತಾರೆ.
ಇನ್ನು ಅಸ್ ರಫ್ ಡೈಮಂಡ್ಗೆ ಪಾಲಿಶ್ ಮಾಡಿ, 10 ಪರ್ಸೆಂಟ್ ಲಾಭಕ್ಕೆ ಮಾರುತ್ತಾರೆ. ಅಲ್ಲಿಂದ ಗೋವಿಂದ್ ಧೋಲಾಕಿಯ ಮತ್ತವರ ಸ್ನೇಹಿತರ ತಂಡದ ವಜ್ರ ವ್ಯಾಪಾರ ಬೆಳೆಯುತ್ತಾ ಹೋಗಿ ಇಂದು 4,800 ರೂ ಗಿಂತಲೂ ಅಧಿಕ ಆಗಿದೆ.