ಬೆಂಗಳೂರು, ಅ.22(DaijiworldNews/AK): ನಾನು 100% ಜೆಡಿಎಸ್ನಲ್ಲಿ ಇದ್ದೇನೆ. ನಾನೇ ಅಧ್ಯಕ್ಷ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯೋಕೆ ಆಗಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಸಿಎಂ ಇಬ್ರಾಹಿಂ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠಾರು ಏನು ತೀರ್ಮಾನ ತೆಗೆದುಕೊಳ್ಳತ್ತಾರೆ ಎಂದು ವಿಜಯದಶಮಿ ತನಕ ನೋಡುತ್ತೇನೆ. ಬಳಿಕ 26ರ ನಂತರ ಕಾನೂನು ಹೋರಾಟದ ಮಾಡುತ್ತೇನೆ ಎಂದು ಹೇಳಿದರು.
ದೇವೇಗೌಡರ ಮೇಲೆ ನನಗೆ ಭರವಸೆ ಇದೆ. ಆದರೆ ಕುಮಾರಸ್ವಾಮಿ ಅವರ ಮೇಲೆ ನನಗೆ ಭರವಸೆ ಇಲ್ಲ ಎಂದರು.ನನ್ನನ್ನು ಅಧ್ಯಕ್ಷ ಸ್ಥಾನದಿಂದ ವಿಸರ್ಜನೆ ಮಾಡೋಕೆ ಅಗುವುದಿಲ್ಲ. ಒಡೆದು ಆಮ್ಲೆಟ್ ಮಾಡೋದಿಕ್ಕೆ ಇದೇನು ಕೋಳಿ ಮೊಟ್ಟೆನೇನ್ರಿ? ಎಂದು ಪ್ರಶ್ನಿಸಿದ ಅವರು ಎಲೆಕ್ಟೆಡ್ ಬಾಡಿ ತೆಗೆಯಬೇಕಾದರೆ ಅದಕ್ಕೆ ನಿಯಮ ಇದೆ. ನಾವು ನಿಯಮ ಪ್ರಕಾರ ಪಕ್ಷ ನಡೆಸಬೇಕೆ ಹೊರತು ನನ್ನ ಇಚ್ಛೆ ಪ್ರಕಾರ ಪಾರ್ಟಿ ನಡೆಸಲು ಆಗಲ್ಲ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೋರ್ ಕಮಿಟಿಯನ್ನು ನಾನು ಮಾಡಿದ್ದು. ಜನತಾದಳದಲ್ಲಿ ರಾಜ್ಯದ ಅಧಿಕಾರ ರಾಜ್ಯದ ಅಧ್ಯಕ್ಷರಿಗೆ ಇರುತ್ತೆ. ರಾಜ್ಯದ ಅಧ್ಯಕ್ಷರು ಸಂವಿಧಾನಕ್ಕೆ ವಿರುದ್ಧ ಹೋದರೆ ಸದಸ್ಯರ ಮೀಟಿಂಗ್ ಕರೆದು ಮೀಟಿಂಗ್ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಆಮೇಲೆ ತೆಗೆಯಬೇಕು ಎಂದು ಹೇಳಿದರು.