ಮುಂಬೈ, ಅ 24 (DaijiworldNews/AK):ಕೆಲವೊಬ್ಬರು ಜೀವನದಲ್ಲಿ ಏನಾದಾರೂ ಸಾಧಿಸಬೇಕು ಅಂತ ತುಂಬಾನೇ ಕನಸು ಕಾಣ್ತಾರೆ. ಆದರೆ ಅದ್ಯಾವುದು ಅವರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವರಿಗೆ ಜೀವನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ. ಅದೇ ರೀತಿ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರ ಕಥೆ . ಇಬ್ಬರು ಕನ್ನಡಿಗರು ಕಟ್ಟಿ ಬೆಳೆಸಿದ ಕಂಪನಿ ಇಂದು ದೊಡ್ಡದಾಗಿ ಬೆಳೆದು ನಿಂತಿದೆ. ಇವರ ಸಾಧನೆಯ ಹಾದಿ ಇಲ್ಲಿದೆ.
ಕಾಮತ್ . ಮೂಲತಃ ಕರ್ನಾಟಕದವರು. ಇಬ್ಬರು ಸಹೋದರರು 2010 ರಲ್ಲಿ ಝೆರೋಧಾ ಎಂಬ ಫಿನ್ಟೆಕ್ ಕಂಪನಿಯನ್ನು ಶುರು ಮಾಡಿದರು. ಇಂದು 2,000 ಕೋಟಿ ರೂಪಾಯಿಗಿಂತ ಹೆಚ್ಚು ಲಾಭವನ್ನು ಗಳಿಸಿದೆ.
ಈ ಕನ್ನಡ ಸಹೋದರರಿಗೂ ಮೊದಲಿಗೆ ಕಂಪನಿ ಕಟ್ಟಲು ಧನಸಹಾಯ ಅವಶ್ಯಕತೆ ಇತ್ತು. ಆದರೆ ಅವರಲ್ಲಿರುವ ಪ್ರತಿಭೆ, ಕಠಿಣ ಪರಿಶ್ರಮದೊಂದಿಗೆ ಅವರಿಗಿದ್ದ ಶಿಕ್ಷಣದ ಕೊರತೆಯನ್ನು ಸರಿದೂಗಿಸಿದರು ಎನ್ನಬಹುದು.
ಈ ಸಹೋದರರಲ್ಲಿ ನಿಖಿಲ್ ಕಾಮತ್ ಹುರುನ್ ಸೆಲ್ಫ್-ಮೇಡ್ ಶ್ರೀಮಂತರ ಪಟ್ಟಿ 2022 ರಲ್ಲಿ ಅಗ್ರಸ್ಥಾನ ಪಡೆದಿದ್ದರು. ಆ ಸಮಯದಲ್ಲಿ, ಅವರ ನಿವ್ವಳ ಮೌಲ್ಯವು 17,500 ಕೋಟಿ ರೂಪಾಯಿ ಆಗಿತ್ತು. ಅವರು ಕೇವಲ 34 ವರ್ಷದವರಿದ್ದಾಗ 2021 ರಲ್ಲಿ ಬಿಲಿಯನೇರ್ ಆದರು.
ಅವರಿಗೆ ಬಾಲ್ಯದಲ್ಲಿ ಶಾಲೆಗೆ ಹೋಗುವುದು ಎಂದರೆ ಇಷ್ಟವಿರಲಿಲ್ಲ. ಹಾಗಾಗಿ ಶಾಲಾ ಶಿಕ್ಷಣದ ಕಡೆಗೆ ಹೆಚ್ಚು ಒಲವು ತೋರಿಸಲಿಲ್ಲ.
ನಿಖಿಲ್ ಗೆ 10ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶವನ್ನು ನಿರಾಕರಿಸಿದ್ದರಿಂದ ಕಾಮತ್ ಶಾಲೆಯನ್ನು ಬಿಟ್ಟರಂತೆ.
ಬಳಿಕ 17ನೇ ವಯಸ್ಸಿನಲ್ಲಿ ಕಾಲ್ ಸೆಂಟರ್ ಒಂದರಲ್ಲಿ ಕೇವಲ 8,000 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡರು. 18ನೇ ವಯಸ್ಸಿನಲ್ಲಿ ಷೇರುಗಳಲ್ಲಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಇದುವೇ ಅವರ ಜೀವನದಲ್ಲಿ ಒಂದು ಮಹತ್ವದ ತಿರುವನ್ನು ನೀಡಿತ್ತು. 2010 ರಲ್ಲಿ ನಿಖಿಲ್ ಮತ್ತು ಅವರ ಸಹೋದರ ನಿತಿನ್ ಕಾಮತ್ ಝೆರೋಧಾವನ್ನು ಒಂದು ಕಂಪನಿಯನ್ನು ಸ್ಥಾಪಿಸಿದರು. ಇದು ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ವೆಚ್ಚ, ಬೆಂಬಲ ಮತ್ತು ತಂತ್ರಜ್ಞಾನದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅವರು ಟ್ರೂ ಬೀಕನ್ ಎಂಬ ಹೆಡ್ಜ್ ಫಂಡ್ ಅನ್ನು ಸಹ ಸ್ಥಾಪಿಸಿದ್ದಾರೆ. ಹೀಗೆ ನಿಖಿಲ್ ಕಾಮತ್ 34ನೇ ವಯಸ್ಸಿಗೆ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿ ಹೊರಹೊಮ್ಮಿದರು.
ಇದು 2094 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿತು. ಕಂಪನಿಯು ಐಐಟಿ, ಐಐಎಂನಿಂದ ಯಾವುದೇ ಉದ್ಯೋಗಿಗಳನ್ನು ಹೊಂದಿಲ್ಲ. ಆದರೆ ಕಂಪನಿಯು ಕನಿಷ್ಠ 1 ಕೋಟಿ ಬಳಕೆದಾರರನ್ನು ಹೊಂದಿದೆ.
ಇದೀಗ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ತಲಾ 100 ಕೋಟಿ ರೂಪಾಯಿಗಳ ಹೆಚ್ಚು ಸ್ಯಾಲರಿ ಪ್ಯಾಕೇಜ್ ಅನ್ನು ಪಡೆಯುವ ಮೂಲಕ ಯಶಸ್ಸು ಗಿಟ್ಟಿಸಿಕೊಂಡಿದ್ದಾರೆ.
ಝೆರೋಧಾದ ನಿಖಿಲ್ ಕಾಮತ್ ಅವರು 37 ವರ್ಷ ವಯಸ್ಸಿನ ಅತ್ಯಂತ ಕಿರಿಯ ಬಿಲಿಯನೇರ್ ಆಗಿ ಎದ್ದು ಕಾಣುತ್ತಾರೆ, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 40 ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಪ್ರಕಾರ, ಕಾಮತ್ ಸಹೋದರರಾದ ನಿತಿನ್ ಮತ್ತು ನಿಖಿಲ್ ಅವರ ಒಟ್ಟು ನಿವ್ವಳ ಮೌಲ್ಯವು ಈಗ $ 5.5 ಬಿಲಿಯನ್ ಆಗಿದೆ.