ಸೇಲಂ, ಅ 27 (DaijiworldNews/MS): ಸಂಕೀರ್ಣ ವಿಜ್ಞಾನ ವಿಷಯಗಳ ಕುರಿತು ಜನಸಾಮಾನ್ಯರು ಮತ್ತು ದಿಗ್ಗಜರೊಂದಿಗೆ ಸರಳ ಹಾಗೂ ಸರಾಗವಾಗಿ ಮಾತನಾಡುತ್ತಿದ್ದ ಖ್ಯಾತ ಜನತಾ ವಿಜ್ಞಾನಿ ಡಾ.ವಿ.ಎಸ್.ವೆಂಕಟವರಧನ್ ತಮಿಳುನಾಡಿನ ಸೇಲಂನಲ್ಲಿ ನಿಧನರಾಗಿದ್ದಾರೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಕುಂತಲಾ, ಪುತ್ರಿ ಅರುಣಾ ಹಾಗೂ ಪುತ್ರ ಸುಂದರ್ ಅವರನ್ನು ಅಗಲಿದ್ದಾರೆ.
ಡಾ.ವಿ.ಎಸ್.ವೆಂಕಟವರಧನ್ ಅವರು ಡಾ ವಿಎಸ್ವಿ ಎಂದೇ ಜನಪ್ರಿಯರಾಗಿದ್ದರು. ಮುಂಬೈನ ನೆಹರು ತಾರಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಸುಮರೂ ಹತ್ತೊಂಬತ್ತು ಪ್ರಮುಖ ಸ್ಕೈ-ಶೋಗಳನ್ನು ನಿರ್ಮಿಸಿ ಸ್ಕ್ರಿಪ್ಟಿಂಗ್ ಮಾಡುವ ದೃಶ್ಯ ಖಗೋಳಶಾಸ್ತ್ರವನ್ನು ಜನಪ್ರಿಯಗೊಳಿಸಿದ್ದರು. ಇಲ್ಲಿ ಅವರು 1979 ರಿಂದ 1997 ರವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಜಿಯೋಫಿಸಿಕ್ಸ್, ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಐವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿರುವ ಅವರು ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ವಿಜ್ಞಾನದ ವಿವಿಧ ಅಂಶಗಳ ಕುರಿತು ಸಾವಿರಕ್ಕೂ ಹೆಚ್ಚು ಜನಪ್ರಿಯ ಲೇಖನಗಳನ್ನು ಬರೆದಿದ್ದರು.
ಖಗೋಳ ಭೌತಶಾಸ್ತ್ರಜ್ಞರಾಗಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಅವರು ಜಿಯೋಫಿಸಿಕ್ಸ್, ಕಾಸ್ಮಿಕ್ ಕಿರಣಗಳು, ಉಲ್ಕೆಗಳು, ಚಂದ್ರ ಮತ್ತು ಗ್ರಹಗಳ ಭೌತಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ್ದರು.