ನವದೆಹಲಿ, ಅ 27 (DaijiworldNews/HR): ಭಾರತೀಯ ದಂಡ ಸಂಹಿತೆ (ಐಪಿಸಿ), ಸಿಆರ್ಪಿಸಿ ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆಯನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿದ್ದಾರೆ.
ಐಪಿಎಸ್ ಕೆಡೆಟ್ಗಳ ಪಾಸಿಂಗ್ ಔಟ್ ಪರೇಡ್ನಲ್ಲಿ ಮಾತನಾಡಿದ ಅವರು, ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳನ್ನು ತ್ಯಜಿಸುತ್ತಿದ್ದು, ಈಗ ಹೊಸ ಆತ್ಮವಿಶ್ವಾಸ ಮತ್ತು ಹೊಸ ಭರವಸೆಗಳೊಂದಿಗೆ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದರು.
ಇನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಮೂರು ಹೊಸ ಮಸೂದೆಗಳನ್ನು ಪರಿಶೀಲಿಸುತ್ತಿದ್ದು, ಪರಿಶೀಲನೆ ಬಳಿಕ ಅಂಗೀಕರಿಸಲಾಗುತ್ತದೆ. ಹೊಸ ಕಾನೂನುಗಳು ಜನರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ.