ಗುವಾಹಟಿ, ಅ.28 (DaijiworldNews/HR): ಮುಸ್ಲಿಮರಲ್ಲಿ ಅಪರಾಧ ಪ್ರಮಾಣಗಳು ಹೆಚ್ಚುತ್ತಿವೆ ಎಂದು ಹೇಳುವ ಮೂಲಕ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಸ್ಲಿಮರು ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂತಹ ಎಲ್ಲಾ ಅಪರಾಧಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂ.1 ಎಂದಿದ್ದಾರೆ.
ಇನ್ನು ನನ್ನ ಹೇಳಿಕೆಯಿಂದ ಯಾವುದೇ ತಪ್ಪಿಲ್ಲ ಎಂದಿರುವ ಅಜ್ಮಲ್ ಶಿಕ್ಷಣ ಕೊರತೆಯಿಂದ ಜನ ಈ ರೀತಿಯ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಜ್ಮಲ್ ಅವರು ಈ ಹೇಳಿಕೆ ನೀಡಿರುವ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ.