ನವದೆಹಲಿ, ಅ. 30 (DaijiworldNews/AK): ವಿಪಕ್ಷಗಳ ಒಕ್ಕೂಟವನ್ನು ಇಂಡಿಯಾ ಎಂದು ನಾಮಕಾರಣ ಮಾಡಿರುವುದನ್ನು ನಿರ್ಬಂಧ ಕೋರಿ ಸಲ್ಲಿಸಿದ ಅರ್ಜಿ ಸಂಬಂಧಪಟ್ಟಂತೆ ಮೈತ್ರಿಪಕ್ಷಗಳನ್ನು ನಿಯಂತ್ರಿಸುವ ಹಕ್ಕನ್ನು ತಾವು ಹೊಂದಿಲ್ಲವೆಂದು ಭಾರತೀಯ ಚುನಾವಣೆ ಆಯೋಗ ಹೈಕೋರ್ಟ್ಗೆ ತಿಳಿಸಿದೆ.
ಉದ್ಯಮಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸಲ್ಲಿಸಿದ್ದು, “ಇಂಡಿಯಾ’ ಎಂಬ ಹೆಸರನ್ನು ರಾಜಕೀಯ ಉದ್ದೇ ಶಗಳಿಗಾಗಿ ಬಳಸುವುದು ಲಾಂಛನ ಹಾಗೂ ಹೆಸರುಗಳ ಕಾಯ್ದೆ 1950ರ ಉಲ್ಲಂಘನೆ ಎಂದು ವಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಚುನಾವಣೆ ಆಯೋಗದ ಪ್ರತಿಕ್ರಿಯೆಯನ್ನು ಕೋರಿತ್ತು. ಹೀಗಾಗಿ ಪ್ರತಿಕ್ರಿಯಿಸಿರುವ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 29A ಯಾವುದೇ ಸಂಘಗಳು, ಸಂಸ್ಥೆಗಳನ್ನು ರಾಜಕೀಯ ಪಕ್ಷಗಳನ್ನಾಗಿ ನೋಂದಾಯಿಸಿಕೊಳ್ಳುವ ಅಧಿಕಾರ ನೀಡಿದೆ. ಆದರೆ ರಾಜಕೀಯ ಮೈತ್ರಿಕೂಟಗಳನ್ನು ಕಾಯ್ದೆಗಳ ಅನ್ವಯ ನಿಯಂತ್ರಿತ ಘಟಕವನ್ನಾಗಿ ಪರಿಗಣಿಸುವ ಹಕ್ಕು ಆಯೋಗಕ್ಕೆ ಇರುವುದಿಲ್ಲವೆಂದು ಸ್ಪಷ್ಟನೆ ನೀಡಿದೆ.