ಹೈದರಾಬಾದ್ ನ. 1 (DaijiworldNews/SK): ಉಸ್ಮಾನಿಯಾ ವಿಶ್ವವಿದ್ಯಾಲಯದ 83ನೇ ಘಟಿಕೋತ್ಸವದಲ್ಲಿ 93 ವರ್ಷದ ಅಜ್ಜಿ ಪಿಎಚ್ಡಿ ಪದವಿಯನ್ನು ಪಡೆದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ
ತೆಲಂಗಾಣ ರಾಜಧಾನಿ ಹೈದರಾಬಾದ್ ಮೂಲದ ರೇವತಿ ತಂಗವೇಲು ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿ 1990ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ಕೈಕಟ್ಟಿ ಕುಳಿತಿಲ್ಲ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದು, ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನೂ ಪಡೆದು, ಬಳಿಕ ಇಂಗ್ಲಿಷ್ನಲ್ಲಿ ಪಿಎಚ್ಡಿ ಮಾಡಲು ಬಯಸಿ ತಮ್ಮ ಅಭಿಲಾಷೆಯಂತೆ 93 ವರ್ಷಕ್ಕ ಪಿಎಚ್ಡಿ ಪದವಿ ಪಡೆದು ಯುವಕರಿಗೆ ಮಾದರಿಯಾಗಿದ್ದಾರೆ.
ರೇವತಿ ತಂಗವೇಲು ಅವರು ಇಂಗ್ಲಿಷ್ ವ್ಯಾಕರಣ, ವರ್ಣಮಾಲೆ ಮತ್ತು ಪದ ಸಂಯೋಜನೆಯಂತಹ ವಿಷಯದಲ್ಲಿ ಸಂಶೋಧನೆ ಮಾಡಿ ಪಿಎಚ್ಡಿ ಪದವಿಯನ್ನು ಯಶಸ್ವಿಯಾಗಿ ಪಡೆದರು. ಪ್ರಸ್ತುತ ರೇವತಿ ತಂಗವೇಲು ಅವರು ಕೀಸ್ ಎಜುಕೇಷನಲ್ ಸೊಸೈಟಿ, ಸಿಕಂದರಾಬಾದ್ನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.