ಶ್ರೀನಗರ, ನ. 5 (DaijiworldNews/SK): ಸಿಬಿಐ ಅಧಿಕಾರಿಯಂತೆ ನಟಿಸಿ ವಂಚಿಸುತ್ತಿದ್ದ ಆರೋಪಿಐರ್ಣಣೂ ಕುಂಜರ್ ಬಾರಾಮುಲ್ಲಾ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಜಾವೀದ್ ಅಹ್ಮದ್ ರಾಥರ್ ಬಂಧಿತ ಆರೋಪಿ. ಆತನ ಬಳಿಯಿದ್ದ ಗೃಹೋಪಯೋಗಿ ವಸ್ತುಗಳು ಮತ್ತು ನಕಲಿ ಗುರುತಿನ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ತನ್ನನ್ನು ತಾನು ಸಿಬಿಐ ಅಧಿಕಾರಿ ಎಂದು ನಕಲಿ ಸಿಬಿಐ ಗುರುತಿನ ಚೀಟಿಯನ್ನು ತೋರಿಸಿ ವ್ಯಕ್ತಿಯೊಬ್ಬರ ಮಗನಿಗೆ ರಾಷ್ಟ್ರೀಯ ರಕ್ಷಣ ಅಕಾಡೆಮಿಯಲ್ಲಿ ಉದ್ಯೋಗವನ್ನು ಖಾತರಿಪಡಿಸುವ ಭರವಸೆ ನೀಡಿ ವಂಚಿಸಿದ್ದಾನೆ. ಇನ್ನೂ ಈತನಿಂದ ವಂಚನೆಗೊಳಗಾದವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.