ಒಡಿಶಾ,ನ 09 (DaijiworldNews/MR): ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಲು ಅತ್ಯಂತ ಕಠಿಣವಾಗಿರುತ್ತದೆ ಮತ್ತು ಇದನ್ನು ಪಾಸ್ ಮಾಡಲು ದೃಢ ನಿಶ್ಚಯ ಮತ್ತು ಪಟ್ಟು ಬಿಡದ ಶ್ರಮ, ಅಷ್ಟೇ ಅಲ್ಲದೆ ಶಿಸ್ತಿನ ಅಧ್ಯಯನ ಸಹ ಬೇಕಾಗುತ್ತದೆ. ನಿರಂತರ ಪರಿಶ್ರಮದ ಹೊರತಾಗಿಯೂ, ಕೆಲವೇ ಜನರು ಈ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ.
ಯಾವುದೇ ಕೋಚಿಂಗ್ ಪಡೆಯದೇ ಯುಪಿಎಸ್ಸಿಯಲ್ಲಿ ಉನ್ನತಸ್ಥಾನದಲ್ಲಿ ತೇರ್ಗಡೆಯಾದ ಕಸ್ತೂರಿ ಪಾಂಡಾ ಒಡಿಶಾ ಮೂಲದವರಾಗಿದ್ದಾರೆ. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಅಖಿಲ ಭಾರತ 67ನೇ ಸ್ಥಾನವನ್ನು ಗಳಿಸಿದ್ದಾರೆ.
ಒಡಿಶಾದ ಕಸ್ತೂರಿ ಪಾಂಡಾ ಅವರು ಬಿಟೆಕ್ ಓದಿದ್ದು, 2022ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ಒಟ್ಟು 1006 ಅಂಕಗಳಲ್ಲಿ 822 ಅಂಕವನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದಿದ್ದರು.ಯಾವುದೇ ಕೋಚಿಂಗ್ ಇಲ್ಲದೆಯೇ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಿದರು.
ಕಸ್ತೂರಿಯವರು NIT ರೂರ್ಕೆಲಾದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದು, ಮುಂದೆ ಯುಪಿಎಸ್ಸಿ ಎದುರಿಸಲು ನಿರ್ಧರಿಸಿದರು. ಹೀಗಾಗಿ ಕೋಚಿಂಗ್ ಪಡೆಯದೇ ತಮ್ಮ ಪಾಡಿಗೆ ತಾವೇ ಓದಲು ಆರಂಭಿಸುತ್ತಾರೆ.ತಮ್ಮ ಪ್ರಯತ್ನದ ಮೂಲಕವೇ ಅವರು ಪರೀಕ್ಷೆ ಪಾಸ್ ಮಾಡುತ್ತಾರೆ.
ಐಎಎಸ್ ಕಸ್ತೂರಿ ಪಾಂಡಾ ಪ್ರಕಾರ ಸಂಪೂರ್ಣ ಯುಪಿಎಸ್ಸಿ ಪಠ್ಯಕ್ರಮವನ್ನು ಸ್ಮಾರ್ಟ್ ಅಧ್ಯಯನ ವ್ಯವಸ್ಥೆಯನ್ನು ಬಳಸಿಕೊಂಡು ಮಾಡಬೇಕು ಎಂಬುದು ಅವರ ಸಲಹೆ. ಮೂಲಭೂತ ಅಂಶಗಳನ್ನು ಅಧ್ಯಯನ ಮಾಡುವ ಮೂಲಕ ಯುಪಿಎಸ್ಸಿ ಗೆ ತಯಾರಿ ನಡೆಸಲು ಅವರು ಸಲಹೆ ನೀಡುತ್ತಾರೆ.
ಕಸ್ತೂರಿ ಪಾಂಡಾ ಮನೆಯಲ್ಲೇ ಇದ್ದುಕೊಂಡು ಹಲವು ಪರೀಕ್ಷಾ ಪತ್ರಿಕೆಗಳನ್ನು ಓದಿ ಅಭ್ಯಾಸ ಮಾಡುತ್ತಿದ್ದರಂತೆ.ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕೆಲವು ಗುರಿಯನ್ನು ತಮಗೆ ತಾವೇ ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ಅದು ಹೇಗಿರಬೇಕು ಎಂದು ಸಹ ಅವರೇ ತಿಳಿಸಿದ್ದಾರೆ. ಅವರ ಗುರಿ 90-94 ಪ್ರಶ್ನೆಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳಿಗೆ ಎರಡು ಗಂಟೆಗಳಲ್ಲಿ ಪೂರ್ಣಗೊಳಿಸುವುದಾಗಿರಬೇಕು ಎಂದು ಹೇಳಿದ್ದಾರೆ.
ಈ ರೀತಿಯಾಗಿ ಯಾವುದೇ ಕೋಚಿಂಗ್ ಇಲ್ಲದೆ ಕೂಡಇಂತಹ ಕಠಿಣ ಪರೀಕ್ಷೆಗಳನ್ನ ಜಯಿಸಬಹುದು ಎಂಬುದಕ್ಕೆ ಕಸ್ತೂರಿ ಪಾಂಡಾ ಅವರೆ ಉತ್ತಮ ಉದಾಹರಣೆಯಾಗಿದ್ದಾರೆ.