ಶಿವಮೊಗ್ಗ, ನ 09 (DaijiworldNews/HR): ಪಕ್ಷ ಕಟ್ಟಿದ ಬಿಎಸ್ ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನವನ್ನು ಇನ್ಯಾರಿಗೂ ಮಾಡಲು ಸಾಧ್ಯವಿಲ್ಲ. ನಂತರ ಬಂದ ಸಿಎಂ ರಿಂದ ರಾಜ್ಯದ ಆಡಳಿತವೇ ಕುಂಟಿ ಹೋಯಿತು ಎಂದು ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅವರ ವಯಸ್ಸನ್ನು ಬಳಸಿಕೊಂಡಿದ್ದಾರೆ. ಈಗ ಪಕ್ಷ ಕಟ್ಟಲು ಅವರನ್ನು ಬಳಸಿಕೊಳ್ಳುತ್ತಿದ್ದೀರಿ. ಬಿಎಸ್ ವೈ ಮಕ್ಕಳು ಕೂಡ ವಯಸ್ಸಾಗಿಲ್ವಾ ಎಂದು ಕೇಳಲು ಆಗಲ್ಲವೇ? ಅವರ ಶಿಷ್ಯನಾಗಿ ನಾನು ಕೇಳುತ್ತಿದ್ದೇನೆ ಎಂದರು.
ಇನ್ನು ಯಡಿಯೂರಪ್ಪನವರು ಹಿರಿಯ ಜೀವ. ಹಿರಿಯ ಜೀವವನ್ನು ಓಡಾಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ನಿಭಾಯಿಸಲು ಅವರಿಗೆ ವಯಸ್ಸಾಗಿದೆ ಎಂದು ಅಧಿಕಾರದಿಂದ ಕೆಳಗಿಳಿಸಿದರು. ಅವರಿಗೆ ವಿಶ್ರಾಂತಿ ಕೊಡಿ ಅವರ ದೇಹದ ಮೇಲೆ ಒತ್ತಡ ಹಾಕಬೇಡಿ ಎಂದಿದ್ದಾರೆ.
ಬಿಜೆಪಿ ಪಕ್ಷಕ್ಕೆ ನಾಯಕತ್ವದ ಬರ ಬಂದಿದೆ. ಬಿಜೆಪಿಗೆ ಅವರ ಐಡೆಂಟಿಟಿ ಲಾಸ್ ಆಗಿದೆ. ಕಳೆದ ಬಾರಿ ಸದನದಲ್ಲಿ ಬಿಜೆಪಿ ಬಹಿಷ್ಕಾರ ಹಾಕಿ ಹೊರಗೆ ಹೋಗಿದ್ದರು. ಮೊದಲು ನಿಮ್ಮ ಪಕ್ಷದಲ್ಲಿ ಆಂತರಿಕ ಬರೆದ ಸಮಸ್ಯೆ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.