ಡೆಹ್ರಾಡೂನ್,ನ 10 (DaijiworldNews/PC): ಬಂದೂಕನ್ನು ಹಿಡಿದು ಭಯಪಡಿಸಿ ದರೋಡೆಕೋರರು ಜುವೆಲ್ಲರಿ ಅಂಗಡಿಗೆ ದಾಳಿ ನಡೆಸಿ ಲೂಟಿ ಮಾಡಿದ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ.
ರಿಲಯನ್ಸ್ ಜುವೆಲ್ಲರ್ಸ್ ಆಭರಣ ಮಳಿಗೆಗೆ ಏಕಾಏಕಿ ನುಗ್ಗಿದ ದರೋಡೆಕೋರರ ತಂಡ ಬಂದೂಕುಗಳನ್ನು ತೋರಿಸಿ ಬೆದರಿಸಿ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ.
ಇನ್ನು ದರೋಡೆಕೋರರು ಅಲ್ಲಿಯ ಸಿಬ್ಬಂದಿಗಳಿಗೆ ಚಿನ್ನವನ್ನು ಬ್ಯಾಗ್ ಗಳಿಗೆ ತುಂಬಿಸುವಂತೆ ಹೆದರಿಸಿದ್ದು ಸುಮಾರು 20 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿಮಾಡಿ ಪರಾರಿಯಾಗಿದ್ದಾರೆ.
ದರೋಡೆಕೋರರು ಬೈಕನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.ಮಳಿಗೆಯಲ್ಲಿ ಆಭರಣ ಲೂಟಿ ಮಾಡಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ದರೋಡೆಕೋರರ ಜಾಡನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.