ರಾಜಸ್ಥಾನ, ನ.10 (DaijiworldNews/SK): ವಿಧಾನಸಭೆ ಚುನಾವಣೆಗೆ ಹತ್ತಿರ ಬರುತ್ತಿದ್ದಂತೆ ಆದಾಯ ತೆರಿಗೆ ಅಧಿಕಾರಿಗಳು ಕಪ್ಪುಹಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿದ್ದಾರೆ.
ಇಂದು ಆದಾಯ ತೆರಿಗೆ ಅಧಿಕಾರಿಗಳು ಜೈಪುರದ ಗಣಪತಿ ಪ್ಲಾಜಾದ ಮೇಲೆ ದಾಳಿ ಮಾಡಿ ಸೇಫ್ಟಿ ವ್ಯಾಲೆಟ್ಸ್ ಲಾಕರ್ ಒಡೆದು ಲಕ್ಷಗಟ್ಟಲೆ ನಗದು ಸಹಿತ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ ಗಣಪತಿ ಪ್ಲಾಜಾದ ರಾಯಲ್ ಸೇಫ್ಟಿ ವ್ಯಾಲೆಟ್ಸ್ ಲಾಕರ್ನಲ್ಲಿರುವ ಅತ್ಯಂತ ಸೂಕ್ಷ್ಮ ಲಾಕರ್ಗಳನ್ನು ಕೂಡ ಅಧಿಕಾರಿಗಳು ನಗದು ವಶಪಡಿಸಿಕೊಂಡಿದ್ದಾರೆ.
ಅತಿ ಸೂಕ್ಷ್ಮ ಲಾಕರ್ಗಳಲ್ಲಿ ಚಿನ್ನದ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಮೊದಲ ಹಂತದಲ್ಲಿ ಎರಡು ಲಾಕರ್ಗಳನ್ನು ತೆರೆಯಲಾಗಿದ್ದು, ಭಾರೀ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ.
ಎರಡನೇ ಲಾಕರ್ನಲ್ಲಿ ನೋಟು ತುಂಬಿದ ಮೂಟೆ ಪತ್ತೆಯಾಗಿದ್ದು, ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇತ್ತ ಜೈಪುರದ ಗಣಪತಿ ಪ್ಲಾಜಾದೊಳಗೆ ಸುಮಾರು 1100 ಲಾಕರ್ಗಳನ್ನು ಪ್ಲಾಜಾದ ನೆಲದಡಿಯಲ್ಲಿ ನಿರ್ಮಿಸಲಾಗಿದೆ. 500 ಕೋಟಿ ಕಪ್ಪುಹಣವನ್ನು ಲಾಕರ್ಗಳಲ್ಲಿ ಇರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ
ಈ ಹಿಂದೆ ಅ. 17 ರಂದು ಆದಾಯ ತೆರಿಗೆ ಅಧಿಕಾರಿಗಳು ಜೈಪುರದ ಗಣಪತಿ ಪ್ಲಾಜಾದ ಮೂರು ಲಾಕರ್ಗಳಿಂದ 1.25 ಕೋಟಿ ರೂಪಾಯಿ ನಗದು ಮತ್ತು 1 ಕೆಜಿ ಚಿನ್ನವನ್ನು ವಶಕ್ಕೆ ಪಡೆದು ಕೊಂಡಿದ್ದರು.