ಡೆಹ್ರಾಡೂನ್, ನ 28 (DaijiworldNews/HR): ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ಒಳಗೆ ಕಳೆದ 17 ದಿನಗಳಿಂದ ಸಿಲುಕಿದ್ದ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಒಬ್ಬೊಬ್ಬರನ್ನು ಹೊರಕ್ಕೆ ತರಲಾಗುತ್ತಿದೆ.
41 ಕಾರ್ಮಿಕರನ್ನು ಸ್ಥಳಾಂತರಿಸಲು ಹೆಲಿಕ್ಯಾಪ್ಟರ್, ಅಂಬುಲೆನ್ಸ್ಗಳನ್ನು, ತಾತ್ಕಲಿಕ ಆಸ್ಪತ್ರೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಕೊರೆವ ಕಾರ್ಯ ಪೂರ್ಣಗೊಂಡ ಬಳಿಕ ಎನ್ಡಿಆರ್ಎಫ್ ಸಿಬ್ಬಂದಿ ಸುರಂಗದೊಳಗೆ ಹೋಗಿ, ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಕರೆ ತರುತ್ತಿದ್ದು, ಈ ಕಾರ್ಯಚರಣೆ ಪೂರ್ಣಗೊಳ್ಳಲು ಕನಿಷ್ಠ 2-3 ಗಂಟೆ ಹಿಡಿಯಲಿದೆ.
ಸ್ಥಳಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರ ಬಂಧುಗಳು ಆಗಮಿಸಿದ್ದಾರೆ.