ನವದೆಹಲಿ, ನ 29 (DaijiworldNews/AK): ವಿಮಾನದಲ್ಲಿ ದಂಪತಿಗಳ ನಡುವೆ ಜಗಳ ನಡೆದ ಹಿನ್ನಲೆ ಬ್ಯಾಂಕಾಕ್ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನವನ್ನು ಬುಧವಾರ ದೆಹಲಿಗೆ ಹಿಂದಿರುಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಅಶಿಸ್ತಿನ ಪ್ರಯಾಣಿಕರ ಬಗ್ಗೆ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲ್ಗೆ ಎಚ್ಚರಿಕೆ ನೀಡಿದ ನಂತರ ಬುಧವಾರ ಬೆಳಿಗ್ಗೆ ಮ್ಯೂನಿಚ್ನಿಂದ ಟೇಕ್ ಆಫ್ ಆಗಿದ್ದ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಜರ್ಮನಿಯ ವ್ಯಕ್ತಿ ಮತ್ತು ಆತನ ಥಾಯಿಲ್ಯಾಂಡ್ ಪತ್ನಿ ನಡುವೆ ಜಗಳ ಆರಂಭವಾಯಿತು, ಇದು ವಿಮಾನದಲ್ಲಿ ಜೋರಾಗಿ ವಾಗ್ವಾದಕ್ಕೆ ಕಾರಣವಾಯಿತು ಎಂದು ವರದಿಗಳು ತಿಳಿಸಿವೆ. ಪತಿಯ ವರ್ತನೆಯಿಂದ ತನಗೆ ಬೆದರಿಕೆ ಇದೆ ಎಂದು ಪತ್ನಿಯೂ ಪೈಲಟ್ನ ಸಹಾಯ ಕೇಳಿದ್ದಾಳೆ.
ಸ್ವಲ್ಪ ಸಮಯದ ನಂತರ, ಲುಫ್ಥಾನ್ಸ ವಿಮಾನ ಸಂಖ್ಯೆ LH772 IGI ನಲ್ಲಿ ಇಳಿಯಲು ಅನುಮತಿ ಕೇಳಿದರು. ಮೊದಲು ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ಕೋರಿತ್ತು, ಪಾಕಿಸ್ತಾನ ನಿರಾಕರಿಸಿತು. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆದ ನಂತರ ಪತಿಯನ್ನು ವಿಮಾನದಿಂದ ಕೆಳಗಿಳಿಸಿ ವಿಮಾನ ನಿಲ್ದಾಣದ ಭದ್ರತೆಗೆ ಹಸ್ತಾಂತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಭದ್ರತಾ ಅಧಿಕಾರಿಗಳು ಜರ್ಮನ್ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕಿಸಲಾಯಿತು. ಇನ್ನು ವ್ಯಕ್ತಿ ವಿಮಾನ ನಿಲ್ದಾಣದ ಅಧಿಕಾರಿಗಳಲ್ಲಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಐಎಸ್ಎಫ್ ಇನ್ನೂ ಸ್ಥಳದಲ್ಲಿಯೇ ಇದೆ. ವ್ಯಕ್ತಿಯನ್ನು ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಬೇಕೇ ಅಥವಾ ಜರ್ಮನಿಗೆ ಹಿಂತಿರುಗಿಸಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.