ಬೆಂಗಳೂರು, ನ 29(DaijiworldNews/AK): ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋ ಟ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಇದೊಂದು ಇಸ್ಲಾಮಿಕ್ ಸ್ಟೇ ಟ್(ಐಎಸ್)ನ ಪ್ರಾಯೋಜಿತ ಕೃತ್ಯ.ಅದಕ್ಕೆ ಶಂಕಿತ ಉಗ್ರರಾದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಶಾರೀಕ್ ನ್ನು ಸಂಘಟನೆ ಬಳಸಿಕೊಂಡಿದೆ ಎಂದು ಬುಧವಾರ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇ ಖೀಸಿದೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಗೆ ಸಂಬಂಧಿಸಿದಂತೆ ಪ್ರೆಶರ್ ಕುಕ್ಕರ್ ಐಇಡಿ ಸಿದ್ಧಪಡಿಸಿದ ಮೊಹಮ್ಮದ್ ಶಾರಿಕ್ ಮತ್ತು ಸ್ಫೋಟಕಕ್ಕೆ ವಸ್ತುಗಳನ್ನು ಒದಗಿಸಿದ ಸೈಯದ್ ಶಾರಿಕ್ ಎಂಬ ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಬುಧವಾರ ತಿಳಿಸಿದೆ. ಕಳೆದ ವರ್ಷ ನವೆಂಬರ್ನಲ್ಲಿ ಮಂಗಳೂರಿನಲ್ಲಿ ಪ್ರಾಯೋಜಿತ ಪ್ರೆಶರ್ ಕುಕ್ಕರ್ ಸ್ಫೋಟ ಮಾಡಿತ್ತು.
ಬುಧವಾರ ನ್ಯಾಯಾಲಯದ ಮುಂದೆ ಇಬ್ಬರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶಾರಿಕ್ ಮತ್ತು ಸೈಯದ್, ಆನ್ಲೈನ್ ಹ್ಯಾಂಡ್ಲರ್ನೊಂದಿಗೆ ಸೇರಿ ಕ್ಯಾಲಿಫೇಟ್ ಸ್ಥಾಪನೆಯ ಪಿತೂರಿಯ ಭಾಗವಾಗಿ ಸ್ಫೋಟವನ್ನು ಯೋಜಿಸಿದ್ದರು ಎಂದು ಅಧಿಕಾರಿ ಹೇಳಿದರು.
ಮೊಹಮ್ಮದ್ ಶಾರಿಕ್ ಅವರು ಕಳೆದ ವರ್ಷ ನವೆಂಬರ್ 19 ರಂದು ಆಟೊ ರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ ಐಇಡಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅದು ಸ್ಫೋಟಗೊಂಡಿತ್ತು. ಹಿಂದೂ ಸಮುದಾಯದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರಿನ ಕದ್ರಿ ಮಂಜುನಾಥ ದೇಗುಲದಲ್ಲಿ ಐಇಡಿ ಅಳವಡಿಸಲು ಯೋಜಿಸಿದ್ದರು ಆದರೆ ಮಾರ್ಗಮಧ್ಯೆ ಲೋ ಇಂಟೆನ್ಸಿಫೈಡ್ ಬಾಂಬ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಶಂಕಿತರ ವಿರುದ್ಧ ಮಂಗಳೂರಿನಲ್ಲಿ ಉಗ್ರರ ಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹ ಪ್ರಕರಣ ದಾಖಲಾಗಿತ್ತು.ಇಸ್ಲಾಮಿಕ್ ಸ್ಟೇ ಟ್ ಬೆಂಬಲಿಸಲು ಗೋಡೆಬರಹ ಬರೆದಿದ್ದರು. ಜತೆಗೆ ಶಿವಮೊಗ್ಗದ ತುಂಗಾ ತೀರದಲ್ಲಿ ಪ್ರಾಯೋಗಿಕ ಸ್ಫೋಟಿಸುವ ಪ್ರಯೋಗ ನಡೆದಿತ್ತು. ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಿದ್ದು, ಸೈಯದ್ ಹಾಗೂ ಶಾರುಕ್ ಪಾತ್ರದ ಬಗ್ಗೆಯೂ ಜುಲೈನಲ್ಲೇ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಉಲ್ಲೇ ಖೀಸಲಾಗಿದೆ ಎಂದು ಎನ್ಐಎ ತಿಳಿಸಿದೆ.