ಮಿಜೋರಾಂ, ಡಿ 04 (DaijiworldNews/MS): ಮಿಜೋರಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ ರಾಜ್ಯ ದಾದ್ಯಂತ 13 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ನವೆಂಬರ್ 7 ರಂದು ಮಿಜೋರಾಂನ 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು, ಮಿಜೋರಾಂ ಮತ ಎಣಿಕೆಯೂ ಡಿಸೆಂಬರ್ 3ರಂದೇ ನಡೆಯಬೇಕಿತ್ತು . ಕ್ರೈ ಸ್ತ ಧರ್ಮೀಯರೇ ಹೆಚ್ಚಾ ಗಿರುವ ರಾಜ್ಯ ದಲ್ಲಿ ಜನರು ಭಾನುವಾರದಂದು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮತಎಣಿಕೆ ದಿನಾಂಕವನ್ನು ಮುಂದೂಡಬೇಕು ಎಂದು ಸಂಘಟನೆಗಳು ಕೋರಿದ್ದವು.
ಮತ ಎಣಿಕೆಗೂ ಮುನ್ನ ಹೊರಬಿದ್ದ ಬಹುತೇಕ ಎಕ್ಸಿಟ್ ಪೋಲ್ ಗಳು ಯಾವುದೇ ಪಕ್ಷಕ್ಕೆ ಬಹುಮತ ನೀಡಿಲ್ಲ. ಎಂಎನ್ಎಫ್, ಜೆಡ್ಪಿಎಂ ಮತ್ತು ಕಾಂಗ್ರೆಸ್ 40 ಸ್ಥಾನಗಳಲ್ಲೂ ಸ್ಪರ್ಧಿಸಿದ್ದರೆ, ಬಿಜೆಪಿ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಅಂಚೆ ಮತಪತ್ರಗಳ ಲೆಕ್ಕಾಚಾರ ನಡೆಯುತ್ತಿದ್ದು, ZPM 11 ಸ್ಥಾನಗಳಲ್ಲಿ, MNF 8 ಮತ್ತು ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ