ಶಿವಮೊಗ್ಗ, ಡಿ 05 (DaijiworldNews/PC): ಶಿವಮೊಗ್ಗದ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯುವಾಗಲೇ ಕೋಣೆಯಿಂದ ಹೊರಬಂದು ಕಟ್ಟಡದಿಂದ ಹಾರಿ ಸಾವಿಗೀಡಾಗಿದ್ದಾಳೆ.
ಮೃತ ವಿದ್ಯಾರ್ಥಿನಿ ಮೇಘಾಶ್ರೀ ಎಂದು ಗುರುತಿಸಲಾಗಿದ್ದು, ದ್ವೀತಿಯ ಪಿಯು ಓದುತ್ತಿದ್ದರು. ಮೇಘಾಶ್ರೀ ದಾವಣಗೆರೆಯ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಮೂಲದವಳಾಗಿದ್ದಾರೆ. ಹಾಸ್ಟೆಲ್ನಲ್ಲಿದ್ದು ಅಭ್ಯಾಸ ಮಾಡುತ್ತಿರುವ ಮೇಘಶ್ರೀ ಇಂದು ಕಾಲೇಜಿಗೆ ಬಯಾಲಜಿ ಪರೀಕ್ಷೆ ಬರೆಯಲು ಬಂದಿದ್ದರು. ಆದರೆ, ಪರೀಕ್ಷೆ ನಡುವೆಯೇ ವಾಶ್ ರೂಂ ಹೋಗುವುದಾಗಿ ಹೇಳಿ ಪರೀಕ್ಷಾ ಕೊಠಡಿಯಿಂದ ಹೊರಬಂದ ಮೇಘಶ್ರೀ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿಯ ಪೋಷಕರಿಂದ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜೊತೆಗೆ, ಕಾಲೇಜಿನ ಮುಂದೆ ಪ್ರತಿಭಟಿಸಿದ್ದು, ಇದಕ್ಕೆ ಹಲವು ವಿದ್ಯಾರ್ಥಿಗಳ ಪೋಷಕರು ಕೂಡ ಕೈಜೋಡಿಸಿದ್ದಾರೆ.
ಮೇಘಶ್ರೀ ಪೋಷಕರಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಲೇಜಿನ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮೇಘಶ್ರೀ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಯಿತು. ಘಟನೆ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.