ನವದೆಹಲಿ,ಡಿ 6 (DaijiworldNews/MS): ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಫೋರ್ಬ್ಸ್ (ಮೋಸ್ಟ್ ಪವರ್ಫುಲ್ ವಿಮೆನ್) ಪಟ್ಟಿಯಲ್ಲಿ 4 ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ.ಈ ಪೈಕಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದಾರೆ.
ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೆಯೆನ್ ಮೊದಲ ಸ್ಥಾನದಲ್ಲಿದ್ದರೆ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡೆ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಯುಎಸ್ ಉಪಾಧ್ಯ ಕ್ಷ ಕಮಲಾ ಹ್ಯಾರಿಸ್ ಮೂರನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 32 ನೇ ಸ್ಥಾನದಲ್ಲಿದ್ದರೆ, ಇತರ ಮೂವರು ಭಾರತೀಯ ಮಹಿಳೆಯರಾದ ಎಚ್ಸಿಎಲ್ ಕಾರ್ಪೊರೇಷನ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ (60), ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್ (70), ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ 76 ನೇ ಸ್ಥಾನ ಸ್ಥಾನದಲ್ಲಿದ್ದಾರೆ.
ರಾಜಕೀಯಕ್ಕೂ ಮುನ್ನ ಯುಕೆಯ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಬಿಬಿಸಿ ವರ್ಲ್ಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು 2019ರಿಂದಲೂ ಭಾರತದಲ್ಲಿ ಪೂರ್ಣ ಸಮಯದ ವರೆಗೆ ಹಣಕಾಸು ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಫಾರ್ಚೂನ್ ಕೂಡಾ ತನ್ನ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಹೆಸರಿಸಿದೆ.