ಬೆಳಗಾವಿ, ಡಿ 6 (DaijiworldNews/MS): ವಿಧಾನಸಬಾ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದು ಮಾತ್ರವಲ್ಲದೆ ಸದನ ಮುಗಿಯುವ ತನಕ ಸದನದಲ್ಲೇ ಇದ್ದು ಸದನಕ್ಕೆ ಗೌರವ ಸಲ್ಲಿಸಿದ್ದ ಶಾಸಕರಿಗೆ ಸ್ಪೀಕರ್ ಯು.ಟಿ.ಖಾದರ್ ರಾಷ್ಟ್ರ ಮತ್ತು ರಾಜ್ಯ ಲಾಂಛನವಿರುವ ವಿಶಿಷ್ಟವಾಗಿ ತಯಾರಿಸಿದ ಕಪ್ ಮತ್ತು ಸಾಸರ್ ನ್ನು ಬಹುಮಾನವಾಗಿ ವಿತರಿಸಿದರು.
ಶಾಸಕರಾದ ಅಶೋಕ್ ರೈಯವರು ಕಳೆದ ಬಾರಿ ಚೊಚ್ಚಲ ಅದಿವೇಶನದಲ್ಲಿ ಭಾಗವಹಿಸಿದ್ದರು. ಕಳೆದ ಬಾರಿಯ ಅಧಿವೇಶನಕ್ಕೆ ಒಟ್ಟು 10 ಮಂದಿ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಅದಿವೇಶನ ಮುಗಿಯುವ ತನಕವೂ ಸದನದಲ್ಲೇ ಇದ್ದರು. ಹತ್ತು ಮಂದಿಯ ಪೈಕಿ ಪುತ್ತೂರು ಶಾಸಕರಾದ ಅಶೋಕ್ ರ್ಯಯವರು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಘೋಷಿಸಿದಂತೆ ಸಮಯಕ್ಕೆ ಸರಿಯಾಗಿ ಅಧಿವೇಶನಕ್ಕೆ ಹಾಜರಾದ ವಿರಾಜಪೇಟೆ ವಿಧಾನಸಭಾ ಕ್ಷೇ ತ್ರ ದ ಶಾಸಕ ಎ.ಎಸ್.ಪೊನ್ನಣ್ಣರಾಷ್ಟ್ರ ಮತ್ತು ರಾಜ್ಯ ಲಾಂಛನವಿರುವ ವಿಶಿಷ್ಟವಾಗಿ ತಯಾರಿಸಿದ ಕಪ್ ಮತ್ತು ಸಾಸರ್ ನ್ನು ಬಹುಮಾನವಾಗಿ ವಿತರಿಸಿದರು.
ದಿನನಿತ್ಯ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಕಾಫಿ ಕಪ್ಅನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.