ಬೆಳಗಾವಿ, ಡಿ 07 (DaijiworldNews/PC): ಹಾಸನದಲ್ಲಿ ಪೊಲೀಸರು ಹಸು ಕಳ್ಳ ಸಾಗಾಣಿಕೆ ಹಾಗೂ ಇತರ ಧಂಧೆ ಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಜೆ ಡಿ ಎಸ್ ಸದಸ್ಯ ಸೂರಜ್ ರೇವಣ್ಣ ಆಗ್ರಹಿಸಿದರು.
ಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸೂರಜ್ ರೇವಣ್ಣ, ಹಾಸನದಲ್ಲಿ ಕೆಲವು ಪೊಲೀಸರೇ ರಾಜಕಾರಣಿಗಳಾಗಿದ್ದಾರೆ. ಮರಳು ಗಣಿಗಾರಿಕೆ, ಗ್ಯಾಂಬ್ಲಿಂಗ್ ಸೇರಿದಂತೆ ಹಲವು ದಂಧೆಗಳಲ್ಲಿ ತೊಡಗಿದ್ದಾರೆ.
ವಾರದಲ್ಲಿ 20-30 ವಾಹನಗಳಲ್ಲಿ ಹಸು ಸಾಗಾಣಿಕೆ ಆಗುತ್ತಿದೆ. ಪ್ರತಿ ಗಾಡಿಗೆ 15 ಸಾವಿರ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರ ವಿರುದ್ದ ಕಿಡಿ ಕಾರಿದರು.
ಈ ಬಗ್ಗೆ ಉತ್ತರಿಸಿದ ಗೃಹ ಸಚಿವ ಸಚಿವ ಪರಮೇಶ್ವರ್ ದೂರು ಬಂದ ಬಳಿಕ ಹಲವು ಆರೋಪಗಳಿರುವ ಜಯಪ್ರಕಾಶ್ ಎಂಬ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದರು. ಗೋ ಸಾಗಾಣಿಕೆ ಸೇರಿದಂತೆ ಹಲವು ಪ್ರಕರಣ ಇದೆ ಇಂತಹವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.