ವಿಜಯಪುರ, ಡಿ 17 (DaijiworldNews/PC): ಶಾಸಕ ಯತ್ನಾಳ್ರಂತಹ ಹುಚ್ಚ ಯಾರು ಇಲ್ಲ, ಅವರ ಮಾತಿಗೆ ರಾಜ್ಯದ ಜನತೆ ಬೆಲೆ ಕೊಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಮ್ಮ ಜಾತಿಯ ಹಾಗೂ ತಮ್ಮ ಪಕ್ಷದ ನಿರಾಣಿಯಂತಹ ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್ಗೆ ನಾಚಿಕೆಯಾಗಬೇಕು. ಇವರೊಬ್ಬ ನಾಯಕನಾ? ಯಾರಾದ್ರೂ ಹೀಗೆ ಮಾತನಾಡುತ್ತಾರಾ? ಅಯೋಗ್ಯತನಕ್ಕೂ ಒಂದು ಮಿತಿ ಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಷ್ಟೇ ಅಲ್ಲದೇ ಇವರ ಇಂತಹ ಅಯೋಗ್ಯತನದಿಂದ ಮುಂದೆ ಬರುವಂತಹ ರಾಜಕಾರಣಿಗಳಿಗೆ ಇವರ ಸಂದೇಶ ಏನು? ಎಂದು ಪ್ರಶ್ನಿಸಿದ್ದಾರೆ.