ನವದೆಹಲಿ, ಡಿ 20 (DaijiworldNews/PC) INDIA ಒಕ್ಕೂಟದ ಸದಸ್ಯರು ಈಗ ಮತ್ತೆ ಇ ವಿ ಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇ ವಿ ವಿ ಪ್ಯಾಟ್ ಸ್ಲಿಪ್ ಬಾಕ್ಸ್ನಲ್ಲಿ ಬೀಳುವ ಮತದಾರರ ಅದನ್ನು ಕೈಯಾರೇ ಪರಿಶೀಲಿಸಬೇಕು. ಮತದಾರ ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ವಿವಿ ಪ್ಯಾಟ್ ಪೆಟ್ಟಿಗೆಯಲ್ಲಿ ಹಾಕಬೇಕು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿದ್ದು ಇದನ್ನು ಅನೇಕ ತಜ್ಞರು ಹಾಗೂ ವೃತ್ತಿಪರರು ಸಹ ಎತ್ತಿದ್ದಾರೆ ಎಂದು ವಿಪಕ್ಷಗಳು ಹೇಳಿವೆ. ದೆಹಲಿಯಲ್ಲಿ ನಡೆದ ನಾಲ್ಕನೇ ಸಭೆಯಲ್ಲಿ ಇವಿಎಂ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿದೆ.
INDIA ಒಕ್ಕೂಟದ ಸದಸ್ಯರು ವಿವಿಪ್ಯಾಟ್ ಸ್ಲಿಪ್ ಮತದಾರರ ಕೈಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು ಈಗ ಸ್ಲಿಪ್ ಪ್ರಿಂಟ್ ಆಗಿ 7 ಸೆಕೆಂಡ್ ಸ್ಕ್ರೀನ್ನಲ್ಲಿ ಕಾಣುತ್ತದೆ. ಒಂದು ವೇಳೆ ಕೈಗೆ ಸ್ಲಿಪ್ ಕೊಟ್ಟರೆ ಮತದಾರ ಅದನ್ನು ಬಾಕ್ಸ್ಗೆ ಹಾಕದೇ ಹರಿದು ಹಾಕಿದರೆ ಬಿದ್ದ ಮತಕ್ಕೂ ವಿವಿ ಪ್ಯಾಟ್ನಲ್ಲಿ ಬಿದ್ದ ಸ್ಲಿಪ್ ತಾಳೆಯಾಗುವುದಿಲ್ಲ. ಇದೇ ಕಾರಣಕ್ಕೆ ವಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ಒಪ್ಪುತ್ತಾ ಎಂಬುದರ ಬಗ್ಗೆಯೇ ಅನುಮಾನವಿದೆ.