ಬುಲಂದ್ ಶಹರ್, ಏ 19(Daijiworld News/MSP):ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಬಿಎಸ್ಪಿ ಬೆಂಬಲಿಗನೊಬ್ಬ ಮಾಯಾವತಿ ನೇತೃತ್ವದ ಬಹುಜನ ಸಮಾಜದ ಪಕ್ಷಕ್ಕೆ ಮತ ಹಾಕುವ ಬದಲು ಅಚಾತುರ್ಯದಿಂದ ತಪ್ಪಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರಗೊಂಡು ತನ್ನ ಬೆರಳನ್ನು ತಾನೇ ಕತ್ತರಿಸಿಕೊಂಡ ಘಟನೆ ನಡೆದಿದೆ.
ಇಲ್ಲಿನ ಶಿಕಾರ್ ಪುರ ಮತಗಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಬುಲಂದ್ ಶಹರ್ ನಲ್ಲಿ ಬಿಜೆಪಿ ಅಭ್ಯರ್ಥಿ ಭೋಲಾ ಸಿಂಗ್ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ಯೋಗೇಶ್ ವರ್ಮಾ ಅವರ ನಡುವೆ ಪೈಪೋಟಿ ಇದೆ.
ಆದರೆ ಬಿಎಸ್ಪಿಯ ಕಟ್ಟಾ ಬೆಂಬಲಿಗ ಪವನ್ ಕುಮಾರ್[25] ಎಂಬ ದಲಿತ ಯುವಕ ಬಿಎಸ್ಪಿಗೆ ಮತ ಹಾಕಲು ಹೋಗಿ ಬಿಜೆಪಿ ಗೆ ಓಟು ಹಾಕಿದ್ದಾನೆ. ತನ್ನಿಂದಾದ ತಪ್ಪಿನಿಂದ ನೊಂದು ಮನೆಗೆ ವಾಪಸಾದವನೇ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಬಳಿಕ ತನ್ನ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.