ನವದೆಹಲಿ,ಏ 19(Daijiworld News/AZM):ಪ್ರಧಾನ ಮಂತ್ರಿ ನರೇದ್ರ ಮೋದಿ ಮೇಲೆ ಟೀಕಾಪ್ರಹಾರ ನಡೆಸಿದ ನಟಿ ಉರ್ಮಿಳಾ ಮಾತೋಂಡ್ಕರ್ ಮೋದಿ ಕುರಿತಾಗಿ ಕಾಮಿಡಿ ಸಿನಿಮಾ ಮಾಡಬೇಕೆಂದು ಹೇಳಿದ್ದಾರೆ.
ಸರ್ಕಾರದ ಮುಖ್ಯಸ್ಥರಾಗಿ ಜನರ ಆಶ್ವಾಸನೆಗಳನ್ನು ಈಡೇರಿಸಲು ಮೋದಿ ವಿಫಲರಾಗಿದ್ದಾರೆ. ಹಾಗಾಗಿ ಅವರು ಬಯೋಪಿಕ್ ಸಿನಿಮಾಗೆ ಅರ್ಹರಲ್ಲ ಎಂದು ಇದೇ ಸಂದರ್ಭದಲ್ಲಿ ಉರ್ಮಿಳಾ ಹೇಳಿದರು. "ಮೋದಿ ಕುರಿತು ಮಾಡಿರುವ ಬಯೋಪಿಕ್ ಸಿನಿಮಾ ಪ್ರಧಾನಿಗೆ ಮಾಡಿದ ಜೋಕ್ ಆಗಿದೆ. 56 ಇಂಚಿನ ಎದೆಯುಳ್ಳವರೆಂದು ಹೇಳುವ ಪ್ರಧಾನಿ ಅವರು ಜನರ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.ಅವರ ಮೇಲೆ ಮಾಡಿರುವ ಸಿನಿಮಾ ಪ್ರಜಾಪ್ರಭುತ್ವ, ಬಡತನ, ಮತ್ತು ಭಾರತದ ವೈವಿದ್ಯತೆ ಮೇಲೆ ಮಾಡಿರುವ ಜೋಕ್, ಬದಲಾಗಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸದ ಹಿನ್ನಲೆಯಲ್ಲಿ ಅವರ ಮೇಲೆ ಹಾಸ್ಯ ಸಿನಿಮಾವನ್ನು ಮಾಡಬೇಕೆಂದು ಎಂದು ಹೇಳಿದರು.